ನವದೆಹಲಿ: ಮೂರು ವರ್ಷದ ಗೋಲ್ಡನ್ ಲ್ಯಾಬ್ರಡಾರ್ ನಾಯಿಯೊಂದು ಬರೋಬ್ಬರಿ 13 ಮರಿಗಳಿಗೆ ಜನ್ಮ ನೀಡಿದೆ. ತಾಯಿ ಬಂಗಾರ ಬಣ್ಣದ್ದಾದರೂ ಮರಿಗಳೆಲ್ಲ ಕಡುಕಪ್ಪು ಎಂಬುದು ವಿಶೇಷ.
ನಾಲ್ಕು ತಾಸುಗಳವರೆಗೆ ಒಂದಾದ ಮೇಲೋಂದರಂತೆ ಮರಿಗಳು ಬರುತ್ತವೆ ಇದ್ದವು ಎಂದು ನಾಯಿ ಒಡತಿ ಕ್ಯಾಥರೀನ್ ಹೇಳಿದ್ದಾಳೆ. ನಾಲ್ಕರಿಂದ ಆರು ಮರಿಗಳು ಜನಿಸಬಹುದೆಂದು ನಿರೀಕ್ಷಿಸಿದ್ದೇವು. ಮೊದಲ 20 ನಿಮಿಷಗಳಲ್ಲಿ ನಾಲ್ಕು ಮರಿಗಳು ಬಂದವು ಬಳಿಕ ಸುದೀರ್ಘ ನಾಲ್ಕು ತಾಸುಗಳವರೆಗೆ ಮರಿಗಳು ಬರುತ್ತಲೇ ಇದ್ದವು.
ಕೆಲ ತಿಂಗಳ ಹಿಂದಷ್ಟೇ ಕ್ಯಾಥರಿನ್ ಸ್ನೇಹಿತರೊಬ್ಬರು ಸಾಕಿದ್ದ ಕಪ್ಪು ಲ್ಯಾಬ್ರಡಾರ್ ಜತೆ ಲೂಸಿಯ ಮಿಲನ ಮಹೋತ್ಸವ ನಡೆದಿತ್ತು. ಈ ಕಾರಣದಿಂದಾಗಿ ಹುಟ್ಟಿದ ಎಲ್ಲ ಮರಿಗಳು ಕಡುಕಪ್ಪು ಬಣ್ಣ ಹೊಂದಿವೆ.
ಇದನ್ನೂ ಓದಿ; ರಷ್ಯಾದಲ್ಲಿ ನೋಂದಣಿಯಾಯ್ತು ವಿಶ್ವದ ಪ್ರಪ್ರಥಮ ಕರೊನಾ ಲಸಿಕೆ; ಅಧ್ಯಕ್ಷ ಪುಟಿನ್ ಮಗಳಿಗೆ ಚುಚ್ಚುಮದ್ದು ಪ್ರಯೋಗ
ಈ ಹಿಂದೆ ಮೇ ತಿಂಗಳಲ್ಲಿ ಲ್ಯಾಬ್ರಡಾರ್ ನಾಯಿ 14 ಮರಿಗಳಿಗೆ ಜನ್ಮನೀಡಿದ್ದು, ಈವರೆಗಿನ ದಾಖಲೆಯಾಗಿದೆ. ಇದಕ್ಕೂ ಮುನ್ನ ಡಾಲ್ಮೇಷಿಯನ್ ನಾಯಿ ಬರೋಬ್ಬರಿ 18 ಮರಿಗಳನ್ನು ಹಾಕಿತ್ತು.
ಆಸ್ಟ್ರೇಲಿಯಾದಲ್ಲಿ ಅತ್ಯಧಿಕ ಎನ್ನುವಂತೆ ನಿಯೋಪಾಲಿಟನ್ ಮ್ಯಾಸ್ಟಿಫ್ ನಾಯಿಯೊಂದು 21 ಮರಿಗಳನ್ನು ಹಾಕಿದ್ದು ಈವರೆಗಿನ ದಾಖಲೆಯಾಗಿದೆ. ಜಾಗತಿಕ ಮಟ್ಟದ ದಾಖಲೆ ಎಂದರೆ ನಿಯೋಪಾಲಿಟನ್ ಮ್ಯಾಸ್ಟಿಫ್ ಇಂಗ್ಲೆಂಡ್ನಲ್ಲಿ 24 ಮರಿಗಳಿಗೆ ಜನ್ಮ ನೀಡಿತ್ತು. ಇದಕ್ಕೂ ಮುನ್ನ ಗ್ರೇಟ್ ಡೆನ್ ನಾಯಿ 21 ಮರಿ ಹಾಕಿದ್ದ ದಾಖಲೆಯನ್ನು ಇದು ಮುರಿದಿತ್ತು.