ವಾರಣಾಸಿ: ಗುದನಾಳದಲ್ಲಿ ಬಚ್ಚಿಟ್ಟಿದ್ದ 38 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಯುವಕನೊಬ್ಬ ವಿಮಾನದ ಮೂಲಕ ಶಾರ್ಜಾದಿಂದ ವಾರಣಾಸಿ ತಲುಪಿದ್ದಾನೆ. ಶನಿವಾರ ರಾತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಸತ್ಯಾಂಶ ತಿಳಿದು ಬಂದಿದೆ.
ವೈದ್ಯರ ನೆರವಿನಿಂದ ಗುದನಾಳದಲ್ಲಿ ಬಚ್ಚಿಟ್ಟಿದ್ದ 633 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ವಿಚಾರಣೆಯ ನಂತರ ಚಿನ್ನವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ.
ತನಿಖೆ ನಡೆಸಿದ ಕಸ್ಟಮ್ ತಂಡ
ಏರ್ ಇಂಡಿಯಾ ವಿಮಾನ IX 183 ಶನಿವಾರ ಶಾರ್ಜಾದಿಂದ ಬಬತ್‌ಪುರ ವಿಮಾನ ನಿಲ್ದಾಣವನ್ನು ತಲುಪಿತ್ತು. ಕಸ್ಟಮ್ಸ್ ಅಧಿಕಾರಿಗಳು ವಿಮಾನ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದರು. ಇದೇ ವೇಳೆ ವಾರಣಾಸಿಯ ಚೌಬೆಪುರ ನಿವಾಸಿ ಸಂದೀಪ್ ಅವರ ವರ್ತನೆ ನೋಡಿ ಕಸ್ಟಮ್ಸ್ ತಂಡಕ್ಕೆ ಅನುಮಾನ ಬಂದಿತ್ತು. ಕೂಲಂಕುಷವಾಗಿ ತಪಾಸಣೆ ನಡೆಸಿದಾಗ ಅವರ ಗುದನಾಳದಲ್ಲಿ ಕ್ಯಾಪ್ಸೂಲ್ ರೂಪದಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ.
ವಶಪಡಿಸಿಕೊಂಡ ಚಿನ್ನದ ಮೌಲ್ಯ 50 ಲಕ್ಷ ರೂ.ಗಿಂತ ಕಡಿಮೆಯಿದ್ದ ಕಾರಣ ಸಂದೀಪ್ ಅವರನ್ನು ಕಾಗದ ಪತ್ರ ನೋಡಿ ನಂತರ ಬಿಡುಗಡೆ ಮಾಡಲಾಗಿದೆ. ಸಂದೀಪ್ ಕೆಲಸ ಹುಡುಕಿಕೊಂಡು ಶಾರ್ಜಾಕ್ಕೆ ಹೋಗಿದ್ದ. ಮೂರು ತಿಂಗಳಲ್ಲಿ ಅವರ ಪ್ರವಾಸಿ ವೀಸಾ ಅವಧಿ ಮುಗಿದಿದೆ. ಕೆಲಸ ಸಿಗಲಿಲ್ಲ, ಹಣ ಖಾಲಿಯಾಯಿತು. ಯಾರೋ ಕಳ್ಳಸಾಗಾಣಿಕೆದಾರರ ಬಳಿ ದೇಶಕ್ಕೆ ತೆರಳುವ ಬಗ್ಗೆ ಕೇಳಿಕೊಂಡಾಗ ಹೇಗಾದರೂ ಮನೆಗೆ ಮರಳಬೇಕೆಂದು ಅವನು ಈ ಹೆಜ್ಜೆ ಇಟ್ಟ ಎನ್ನಲಾಗಿದೆ.