ನ್ಯೂಸ್

ತನ್ನ ಕಚೇರಿಯಲ್ಲೇ ಚಿನ್ನ ಕದ್ದು ಸಿಕ್ಕಿಬಿದ್ದ ಮ್ಯಾನೇಜರ್​! ಬೆಂಗಳೂರಲ್ಲಿ ಘಟನೆ

arunakunigal

ಬೆಂಗಳೂರು: ತನ್ನ ಕಚೇರಿಯಲ್ಲಿ ಚಿನ್ನ ಕದ್ದಿದ್ದ ಮಣಪ್ಪುರಂ ಫೈನಾನ್ಸ್ ಮ್ಯಾನೇಜರ್​ವೊಬ್ಬರನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಸಿದ್ದೇಶ್ ಬಂಧಿತ. ಮಣಪ್ಪುರಂ ಫೈನಾನ್ಸ್​ನ ನಂದಿನಿ ಲೇಔಟ್ ಬ್ರಾಂಚ್​ ಮ್ಯಾನೇಜರ್ ಆಗಿದ್ದ ಸಿದ್ದೇಶ್​ಗೆ ಬೆಟ್ಟಿಂಗ್ ಚಟ ಬೆಳೆಸಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹಲವೆಡೆ ಸಾಲ ಮಾಡಿಕೊಂಡಿದ್ದರು. ಕೊನೆಗೆ ಸಾಲ ತೀರಿಸಲು ಗ್ರಾಹಕರೊಬ್ಬರ 40 ಗ್ರಾಂ ಚಿನ್ನದ ಸರವನ್ನೇ ಕದ್ದಿದ್ದಾರೆ.

ಆಡಿಟಿಂಗ್ ವೇಳೆ ಚಿನ್ನದ ಸರ ಮಿಸ್ಸಾಗಿರೋದು ಬೆಳಕಿಗೆ ಬಂದಿದೆ. ಅತ್ತ ಮ್ಯಾನೇಜರ್ ಸಿದ್ದೇಶ್ ಕೂಡ ಕೆಲಸಕ್ಕೆ ಬಂದಿರಲಿಲ್ಲ. ಅನುಮಾನಗೊಂಡ ಮಾಲೀಕರು ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಪೊಲೀಸರು ಆರೋಪಿಯನ್ನ ಬಂಧಿಸಿ 1.45 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಸರವನ್ನ ವಶಕ್ಕೆ ಪಡೆದಿದ್ದಾರೆ.