ನ್ಯೂಸ್

ಚಿನ್ನ 500, ಬೆಳ್ಳಿ 2,000 ರೂ. ಇಳಿಕೆ

ಮೋಹನ್​ ಶೆಟ್ಟಿ

ನವದೆಹಲಿ: ರೂಪಾಯಿ ಮೌಲ್ಯವರ್ಧನೆಯಿಂದಾಗಿ ಚಿನ್ನದ ಬೆಲೆಯ ಮೇಲೆ ಒತ್ತಡ ಉಂಟಾಗಿ, ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಚಿನ್ನದ ಬೆಲೆ 500 ಕಡಿಮೆಯಾಗಿದೆ.

ಬುಧವಾರ 10 ಗ್ರಾಂಗೆ 98,520 ರೂ. ಇದ್ದ ಶೇ. 99.9ರಷ್ಟು ಶುದ್ಧತೆಯ ಚಿನ್ನ ಗುರುವಾರ 98,020 ರೂ.ಗೆ ತಲುಪಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನ 400 ರೂ. ಇಳಿಕೆಯಾಗಿದೆ. ಬುಧವಾರ 98,200 ರೂ. ಇದ್ದದ್ದು ಗುರುವಾರ 97,800ಕ್ಕೆ ಇಳಿದಿದೆ. ಬೆಳ್ಳಿಯ ಬೆಲೆ ಗುರುವಾರ 2,000 ರೂ. ಕುಸಿದು ಕೆಜಿಗೆ 1,12,000 ರೂ.ಗೆ ತಲುಪಿದೆ. ಇದು ಬುಧವಾರ ಕೆಜಿಗೆ 1,14,000 ರೂ. ಇತ್ತು.