Gold Rate: ಚಿನ್ನದ ಬೆಲೆ ಮತ್ತೇ ಗಗನದತ್ತ ಮುಖ ಮಾಡಿದೆ. ಸದ್ಯ ಇದೇ ಗೋಲ್ಡ್ ಗ್ರಾಹಕರನ್ನು ಚಿಂತೆಗೆ ದೂಡಿದೆ. ಇತ್ತೀಚೆಗಷ್ಟೇ 90,000 ರೂ.ಗೆ ಇಳಿದಿದ್ದ ದರ, ಇದೀಗ ಮತ್ತೆ 1 ಲಕ್ಷ ರೂ.ಗೆ ಸನ್ನಿಹಿತವಾಗಿದೆ. ಇಂದು (ಜು.12) ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ 10 ಗ್ರಾಂ. 710 ರೂ. ಹೆಚ್ಚಳ ಕಂಡಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆ 650 ರೂ. ಹೆಚ್ಚಾಗಿದೆ. ಇದರೊಂದಿಗೆ ಕಳೆದ ಮೂರು ದಿನಗಳಲ್ಲಿ ಚಿನ್ನದ ಬೆಲೆ 1,530 ರೂ. ಏರಿಕೆಯಾಗಿದೆ.
ಇದನ್ನೂ ಓದಿ: ಮಾರುಕಟ್ಟೆ ಟ್ರೆಂಡ್ನ ಲಾಭ ಪಡೆಯುವುದೇ ಮೊಮೆಂಟಮ್ ಇನ್ವೆಸ್ಟಿಂಗ್ ಶಕ್ತಿ| Power of Momentum Investing
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಹೆಚ್ಚಾಗಿದೆ. ಒಂದು ಔನ್ಸ್ ಚಿನ್ನದ ಬೆಲೆ 39 ಡಾಲರ್ ಏರಿದೆ. ಇದರೊಂದಿಗೆ, ಶನಿವಾರ ಬೆಳಗ್ಗೆ ಒಂದು ಔನ್ಸ್ ಚಿನ್ನದ ಬೆಲೆ 3,355 ಡಾಲರ್ನಲ್ಲಿ ವಹಿವಾಟು ನಡೆಸುತ್ತಿದೆ. ಇದರೊಂದಿಗೆ ಬೆಳ್ಳಿಯ ಬೆಲೆಯೂ ತೀವ್ರವಾಗಿ ಹೆಚ್ಚಳ ಕಂಡಿದೆ. ಒಂದು ಔನ್ಸ್ ಬೆಳ್ಳಿ 4,000 ರೂ. ಹೆಚ್ಚಾಗಿದೆ. ಇದರೊಂದಿಗೆ, ಕಳೆದ ಎರಡು ದಿನಗಳಲ್ಲಿ ಒಂದು ಕೆಜಿ ಬೆಳ್ಳಿಯ ಮೇಲೆ 5,000 ರೂ. ಏರಿಕೆಯಾಗಿದೆ. ಇದು ಗ್ರಾಹಕರಲ್ಲಿ ತೀವ್ರ ಆಘಾತ ತಂದೊಡ್ಡಿದೆ.
ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ, ಈ ತಿಂಗಳ ಅಂತ್ಯದೊಳಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮತ್ತೇ ಹೊಸ ದಾಖಲೆಗಳನ್ನು ದಾಖಲಿಸುವುದು ಖಚಿತ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಒಂದೇ ಗಂಟೆಯಲ್ಲಿ 10 ಕೆಜಿ ಗೋಡಂಬಿ-ಬಾದಾಮಿ ತಿಂದ ಅಧಿಕಾರಿಗಳು! ಬಿಲ್ ಬಂದಾಗ ಸತ್ಯ ಬಯಲಾಯಿತು.. dry fruits
ಗಮನಿಸಿ: ಮೇಲೆ ತಿಳಿಸಲಾದ ಬೆಲೆಗಳು ಬೆಳಗಿನ ಮಾರುಕಟ್ಟೆಯ ಆರಂಭದಲ್ಲಿ ಮಾತ್ರ. ಈ ಚಿನ್ನ ಮತ್ತು ಬೆಳ್ಳಿ ದರಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ದಯವಿಟ್ಟು ಗಮನಿಸಿ.