ಸಾಂದರ್ಭಿಕ ಚಿತ್ರ 
ನ್ಯೂಸ್

ಗಗನಕ್ಕೇರುತ್ತಿದೆ ಬಂಗಾರದ ಬೆಲೆ! ಹಬ್ಬದ ಸೀಸನ್​ ಅಲ್ಲದಿದ್ದರೂ ಚಿನ್ನದ ದರ ಏರಿಕೆ ಏಕೆ? | Gold Rate

ಬೆಂಗಳೂರು: ಹಬ್ಬ ಹರಿದಿನಗಳಲ್ಲಿ ಚಿನ್ನದ ಖರೀದಿ ಏರಿಕೆಯಾಗುವುದು ಸಾಮಾನ್ಯ. ಆದರೆ ಬಹುತೇಕ ಚಿನ್ನ ಖರೀದಿ ಮಾಡದ ಪಿತೃಪಕ್ಷದಲ್ಲಿ ಈ ಬಾರಿ ಬಂಗಾರದ ಬೆಲೆ(Gold Rate) ಗಗನಕ್ಕೇರುತ್ತಿದೆ.

ಮಹಾನವಮಿ, ದೀಪಾವಳಿಗೆ ಮೊದಲು ಜನರು ಚಿನ್ನ ಮತ್ತು ಬೆಳ್ಳಿಯಂತಹ ದುಬಾರಿ ಲೋಹಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ ಹಬ್ಬದ ಸೀಸನ್ ಇನ್ನೂ ಆರಂಭವಾಗಿಲ್ಲ, ಅದಕ್ಕೂ ಮುನ್ನವೇ ಚಿನ್ನದ ಬೆಲೆ(Gold Rate) ಗಗನ ಮುಟ್ಟಲಾರಂಭಿಸಿದೆ. ಹೀಗಿರುವಾಗ ಬಂಗಾರದ ಬೆಲೆ ಏಕೆ ಹೆಚ್ಚುತ್ತಿದೆ ಮತ್ತು ಯಾವಾಗ ಬೆಲೆ ಇಳಿಕೆಯಾಗಬಹುದು ಎಂಬ ಪ್ರಶ್ನೆ ಜನರ ಮನದಲ್ಲಿ ಮೂಡುತ್ತಿದೆ.

ಚಿನ್ನದ ಬೆಲೆ ಎಷ್ಟು? Gold Rate

ಶನಿವಾರ ಕೂಡ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ(Gold Rate)ಯಲ್ಲಿ ಏರಿಕೆಯಾಗಿದೆ. ಭಾರತದಲ್ಲಿ 24 ಕ್ಯಾರೆಟ್​ನ ಪ್ರತಿ 10 ಗ್ರಾಂ ಚಿನ್ನ 77ಸಾವಿರ ರೂ.ಗೆ ತಲುಪಿದೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂಗೆ 77ಸಾವಿರ 190 ರೂ.ಗೆ ತಲುಪಿದೆ. ಅದೇ ರೀತಿ 22ಕ್ಯಾರೆಟ್​ ಚಿನ್ನಕ್ಕೆ 72,100 ರೂ.ಇದೆ. ಹಲವು ರಾಜ್ಯಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ.

ಬಳಕೆ ಹೆಚ್ಚು(Gold Rate): ಭಾರತದಲ್ಲಿ ಚಿನ್ನವನ್ನು ಖರೀದಿಸುವ ಸಂಪ್ರದಾಯವು ಸಾಕಷ್ಟು ಹಳೆಯದು. ಮಹಿಳೆಯರು ಚಿನ್ನ ಖರೀದಿಸಲು ಇಷ್ಟಪಡುತ್ತಾರೆ. ಒಂದೆಡೆ ಚಿನ್ನ ತನ್ನ ಸೌಂದರ್ಯವನ್ನು ಹೆಚ್ಚಿಸಿದರೆ, ಮತ್ತೊಂದೆಡೆ ಹೂಡಿಕೆಗೆ ಇದು ಉತ್ತಮ ಆಯ್ಕೆಯಾಗಿದೆ.

ಈ ವರ್ಷ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ.