Gold Price: ಪ್ರಸ್ತುತ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,12,150 ರೂ. ದಾಟಿ ಮುನ್ನುಗ್ಗುತ್ತಿರುವುದು ಚಿನ್ನದಂತ ಗ್ರಾಹಕರಲ್ಲಿ ತೀವ್ರ ಬೇಸರ ಮೂಡಿಸಿದೆ. 1 ಲಕ್ಷವಿದ್ದಾಗಲೇ ಹೇಗಪ್ಪಾ ಕೊಳ್ಳುವುದು? ಎಂದು ಚಿಂತಿಸುತ್ತಿದ್ದ ಜನರು, ಈಗ ಒಂದೂವರೆ ಲಕ್ಷದತ್ತ ಸಮೀಪಿಸುತ್ತಿರುವ ಗೋಲ್ಡ್ನತ್ತ ತಿರುಗಿ ನೋಡಲು ಮನಸ್ಸು ಸಹ ಮಾಡುತ್ತಿಲ್ಲ. ಈ ಮಧ್ಯೆ, ತ ಚಿನ್ನದ ಬೆಲೆಯಲ್ಲಿ ನಿರೀಕ್ಷೆಗೂ ಮೀರಿದ ಏರಿಕೆ ಕಂಡುಬರಲಿದ್ದು, ಶೀಘ್ರವೇ ಚಿನ್ನವು 2 ಲಕ್ಷ ರೂ. ತಲುಪಲಿದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
ಒಂದೆಡೆ, ಜಾಗತಿಕ ಉದ್ವಿಗ್ನತೆಯಿಂದಾಗಿ ಚಿನ್ನದ ಬೆಲೆಗಳು ಕ್ರಮೇಣವಾಗಿ ಹೆಚ್ಚುತ್ತಿವೆ ಮತ್ತು ಭವಿಷ್ಯದಲ್ಲಿ ಚಿನ್ನದ ಬೆಲೆ 2 ಲಕ್ಷ ರೂ. ದಾಟಲಿದೆ ಎಂಬ ನಿರೀಕ್ಷೆಯ ಬಗ್ಗೆ ಸದ್ಯ ಗೋಲ್ಡ್ ಪ್ರಿಯರು ಚಿಂತಾಕ್ರಾಂತರಾಗಿದ್ದಾರೆ. ಕೆಲವು ತಿಂಗಳುಗಳ ಹಿಂದೆಷ್ಟೇ 80-90 ಸಾವಿರ ರೂ.ನಲ್ಲಿದ್ದ 10 ಗ್ರಾಂ ಚಿನ್ನದ ಬೆಲೆ, ಈಗ 1 ಲಕ್ಷ ರೂ. ದಾಟಿ ಮುಂದೋಗಿದೆ. ಈ ಸಂದರ್ಭಗಳಲ್ಲಿ, ಜಾಗತಿಕ ಹೂಡಿಕೆ ಸಂಸ್ಥೆ ಜೆಫರೀಸ್‌ನ ಜಾಗತಿಕ ಇಕ್ವಿಟಿ ತಂತ್ರದ ಮುಖ್ಯಸ್ಥ ಕ್ರಿಸ್ ವುಡ್ ಮಾತನಾಡಿ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಗಳು ದಾಖಲೆಯ ಮಟ್ಟವನ್ನು ಮೀರಬಹುದು ಎಂದು ಭವಿಷ್ಯ ನುಡಿದಿದ್ದಾರೆ.
ವರದಿಯ ಪ್ರಕಾರ, ಪ್ರಸ್ತುತ ಬುಲ್ ರನ್ ಮುಂದುವರಿದರೆ, ಅಮೆರಿಕದಲ್ಲಿ ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಔನ್ಸ್‌ಗೆ 6,600 ಡಾಲರ್ ಮೀರಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಅಂದರೆ, ಚಿನ್ನವು ಪ್ರತಿ ಔನ್ಸ್‌ಗೆ 6,600 ಡಾಲರ್ ತಲುಪಬಹುದು (ಸರಿಸುಮಾರು 5,81,205 ಲಕ್ಷ ರೂ.). ಒಂದು ಔನ್ಸ್ ಚಿನ್ನವು 28.3495 ಗ್ರಾಂ ಆಗಿದ್ದರೆ, ಪ್ರತಿ ಗ್ರಾಂ ಬೆಲೆ ಸುಮಾರು 20,500 ರೂ. ಆಗಿರುತ್ತದೆ. ಅಲ್ಲಿಗೆ 10 ಗ್ರಾಂ ಬೆಲೆ 2,05,000 ರೂ.ಗೆ ಆಗಲಿದೆ. ಹಾಗೆ ಸಂಭವಿಸಿದ್ದಲ್ಲಿ, ಇದು ಭಾರತೀಯ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಪೌಂಡ್‌ಗಳಲ್ಲಿ ಚಿನ್ನದ ಬೆಲೆ ಇರಲಿದೆ. ಈ ನಿಟ್ಟಿನಲ್ಲಿ ಚಿನ್ನವು 2 ಲಕ್ಷ ರೂ. ದಾಟುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಕಳೆದ 20 ವರ್ಷಗಳಲ್ಲಿ ಚಿನ್ನದ ಬೆಲೆಗಳ ಬಗ್ಗೆ ಹಲವಾರು ಭವಿಷ್ಯವಾಣಿಗಳನ್ನು ನುಡಿದಿರುವ ಕ್ರಿಸ್ ವುಡ್, 2002ರಲ್ಲಿ, ಅದು 3,400 ಡಾಲರ್, 2005ರಲ್ಲಿ 3,700 ಡಾಲರ್, 2016ರಲ್ಲಿ 4,200 ಡಾಲರ್, 2020ರಲ್ಲಿ 5,500 ಡಾಲರ್ ಮತ್ತು ಇತ್ತೀಚಿನ 6,600 ಡಾಲರ್ ಭವಿಷ್ಯವಾಣಿಗಳು ಜನರನ್ನು ಗೊಂದಲಕ್ಕೆ ದೂಡಿದೆ. ಈ ವಿಚಾರಗಳನ್ನು ಗ್ರೀಡ್ ಅಂಡ್ ಫಿಯರ್ ವರದಿಯಲ್ಲಿ ಕ್ರಿಸ್ ಬಹಿರಂಗಪಡಿಸಿದ್ದಾರೆ.
ಹೂಡಿಕೆ, ಆಭರಣ ಮತ್ತು ಹಬ್ಬಗಳಿಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ನಿರೀಕ್ಷೆಗಿಂತಲೂ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಮಟ್ಟದಲ್ಲಿ ಚಿನ್ನದ ಬೆಲೆಗಳು ಪ್ರತಿ ಔನ್ಸ್‌ಗೆ 6,600 ಡಾಲರ್ ತಲುಪಿದರೆ, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆಗಳಿವೆ. ಅಮೆರಿಕದಲ್ಲಿ ಪ್ರಸ್ತುತ ಒಂದು ಔನ್ಸ್ ಚಿನ್ನದ ಬೆಲೆ 3,600 ಡಾಲರ್ ಆಗಿದೆ. ಭಾರತದಲ್ಲಿ, 10 ಗ್ರಾಂ ಬೆಲೆ 1,12,000 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಅಮೆರಿಕದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 6,600 ಡಾಲರ್ ತಲುಪಿದರೆ, ಅದು ಭಾರತೀಯ ಬುಲಿಯನ್ ಮಾರುಕಟ್ಟೆಯ ಮೇಲೂ ಪರಿಣಾಮ ಬೀರುತ್ತದೆ.
ಇದರ ಪರಿಣಾಮವಾಗಿ, ಭಾರತೀಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ರೂ. 2 ಲಕ್ಷ ದಾಟುವ ನಿರೀಕ್ಷೆಯಿದೆ. ಫೆಡರಲ್ ರಿಸರ್ವ್ ನೀತಿ ಘೋಷಣೆಗೂ ಮುನ್ನ ಈ ವಾರ ಚಿನ್ನದ ಬೆಲೆ ಔನ್ಸ್‌ಗೆ $ 3,700 ರ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈ ಸಂದರ್ಭದಲ್ಲಿ, ಚಿನ್ನದ ಬೆಲೆಗಳ ಕುರಿತು ಕ್ರಿಸ್ ವುಡ್ ಅವರ ಭವಿಷ್ಯವಾಣಿಗಳು ಹೂಡಿಕೆದಾರರಲ್ಲಿ ಹೆಚ್ಚಿನ ಆಸಕ್ತಿಯನ್ನು ಹುಟ್ಟುಹಾಕುತ್ತಿವೆ,(ಏಜೆನ್ಸೀಸ್).