ನ್ಯೂಸ್

ಚಿನ್ನದ ಬೆಲೆ 1,200 ರೂ. ಇಳಿಕೆ

ನವದೆಹಲಿ: ಆಭರಣ ವ್ಯಾಪಾರಿಗಳು ಮತ್ತು ದಾಸ್ತಾನುದಾರರಿಂದ ನಿರಂತರ ಮಾರಾಟ ಹಾಗೂ ಜಾಗತಿಕ ದುರ್ಬಲ ಪ್ರವೃತ್ತಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ಮಂಗಳವಾರ ಚಿನ್ನದ ಬೆಲೆ 1,200 ರೂ. ಕಡಿಮೆಯಾಗಿದೆ.

ಸೋಮವಾರ 10 ಗ್ರಾಂಗೆ 1,01,370 ರೂ. ಇದ್ದ ಶೇ. 99.9 ಶುದ್ಧತೆಯ ಚಿನ್ನ ಮಂಗಳವಾರ 1,00,170 ರೂ.ಗೆ ಇಳಿದಿದೆ. ಶೇ. 99.5 ಶುದ್ಧತೆಯ ಚಿನ್ನ 1,100 ರೂ. ಕಡಿಮೆಯಾಗಿ 99,450 ರೂ.ಗೆ ತಲುಪಿದೆ. ಇದರ ಬೆಲೆ ಸೋಮವಾರ 10 ಗ್ರಾಂಗೆ 1,00,550 ರೂ. ಇತ್ತು. ಬೆಳ್ಳಿಯ ಬೆಲೆ ಸೋಮವಾರ ಕೆಜಿಗೆ 1,07,100 ರೂ. ಇತ್ತು. ಮಂಗಳವಾರ 100 ರೂ. ಏರಿಕೆಯಾಗಿ ಕೆಜಿಗೆ 1,07,200 ರೂ. ಆಗಿದೆ.