ಚಿಂತಾಮಣಿ: ದೇವರ ಸಾಮಗ್ರಿಗಳಿಗೆ ಮೆರಗು ನೀಡುವ ನೆಪದಲ್ಲಿ ಅಪರಿಚಿತರು 38 ಗ್ರಾಂ ಆಭರಣ ಕದ್ದು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಿಗವಪಲ್ಲಿಯ ಕವಿತಾ (20) ನೀಡಿದ ದೂರು ಆಧರಿಸಿ ಆ.25ರಂದು ಪ್ರಕರಣ ದಾಖಲಾಗಿದೆ. ದ್ವಿಚಕ್ರವಾಹನದಲ್ಲಿ ಬಂದ ಮೂವರು ದೇವರ ಸಾಮಗ್ರಿಗಳನ್ನು ಸ್ವಚ್ಛಗೊಳಿಸಿ, ನಂತರ ಬಂಗಾರದ ಒಡವೆ ಸ್ವಚ್ಛಗೊಳಿಸುವುದಾಗಿ ಪಡೆದು, 2 ಗ್ರಾಂ ಕಿವಿ ಓಲೆ, 18 ಗ್ರಾಂ ಮಾಂಗಲ್ಯ ಸರ, 12 ಗ್ರಾಂನ 50 ಗುಂಡುಗಳು, 2 ಗ್ರಾಂ ಲಕ್ಷ್ಮೀಕಾಸು, 4 ಗ್ರಾಂ ಕಿವಿ ಓಲೆ ಕದ್ದೊಯ್ದಿದ್ದಾರೆ ಎಂದು ದೂರಲಾಗಿದೆ.