ನ್ಯೂಸ್

ಕೇವಲ 90 ಸೆಕೆಂಡ್​ಗಳಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ ದರೋಡೆ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್| Robbery

Robbery: ಅಮೆರಿಕಾದ ವೆಸ್ಟ್ ಸಿಯಾಟಲ್ ನಗರದ ಮಿನಾಶೆ ಅಂಡ್ ಸನ್ಸ್ ಆಭರಣ ಅಂಗಡಿಯಲ್ಲಿ ಮಾಸ್ಕ್​ಧಾರಿ ದುಷ್ಕರ್ಮಿಗಳು ನುಗ್ಗಿ, ಕೇವಲ 90 ಸೆಕೆಂಡುಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದು ಸಿಸಿಟಿವಿಯಲ್ಲಿ ದೃಶ್ಯ ದಾಖಲಾಗಿದೆ.

ಆಭರಣದ ಮೌಲ್ಯ 2 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಎಂದು ಹೇಳಲಾಗುತ್ತದೆ. ನಮ್ಮ ಕರೆನ್ಸಿಗೆ ಹೋಲಿಸಿ  ನೋಡಿದರೆ ಅದು 17.53 ಕೋಟಿ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಗಲು ಹೊತ್ತಿನಲ್ಲೇ ಕೆಲವು ಮಾರಕ ಆಯುಧಗಳೊಂದಿಗೆ ಅಂಗಡಿಯೊಳಗೆ ಪ್ರವೇಶಿಸಿರುವ ದುಷ್ಕರ್ಮಿಗಳು ಅಂಗಡಿ ಮಾಲೀಕರನ್ನು ಬೆದರಿಸಿ ಬಳಿಕ, ಪ್ರದರ್ಶನದ ಗಾಜುಗಳನ್ನು ಒಡೆದು ಚಿನ್ನ ಮತ್ತು ವಜ್ರದ ಆಭರಣಗಳನ್ನು ಅವರು ತಂದಿದ್ದ ಚೀಲಗಳಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ. ಇಡೀ ದರೋಡೆ ಆಭರಣ ಅಂಗಡಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ.

ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ದರೋಡೆ ಮಾಡಿದ ಆರೋಪಿಯನ್ನು ಬಂಧಿಸಲು ಅಲ್ಲಿನ ಪೊಲೀಸರು ಹುಡುಕಾಟ ನಡೆಸಿದ್ದಾರೆ. (ಏಜೆನ್ಸೀಸ್)