ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಇಳಿಕೆಯಾಗಿರುವುದರಿಂದ ಇಲ್ಲಿನ ಚಿನಿವಾರಪೇಟೆಯಲ್ಲೂ ಗುರುವಾರ ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿದೆ.
ಶೇ.99.9 ಪರಿಶುದ್ಧತೆಯ 10 ಗ್ರಾಂ ಚಿನ್ನದ ದರವು 150 ರೂ. ಕಡಿಮೆಯಾಗಿ, 1,00,560 ರೂ.ನಂತೆ ಮಾರಾಟವಾಗಿದೆ. ಬುಧವಾರ ಇದು 1,00,710 ರೂ. ಇತ್ತು. ಶೇ.99.5 ಪರಿಶುದ್ಧತೆಯ 10 ಗ್ರಾಂ ಚಿನ್ನದ ದರ ಕೂಡ 150 ರೂ. ಇಳಿಕೆಯಾಗಿ, 99,800 ರೂ. ಆಗಿದೆ.
ಬುಧವಾರ 99,950 ರೂ.ಗಳಷ್ಟಿತ್ತು. ಬೆಳ್ಳಿ ದರವು ಕೆ.ಜಿಗೆ 1 ಸಾವಿರ ರೂ. ಕಡಿಮೆಯಾಗಿದ್ದು, 1,07,200 ರೂ.ಗೆ ತಲುಪಿದೆ. ಬುಧವಾರ ಬೆಳ್ಳಿ ಬೆಲೆ 1 ಸಾವಿರ ರೂ. ಏರಿಕೆಯಾಗಿ ಸಾರ್ವಕಾಲಿಕ ದಾಖಲೆಯಾದ 1,08,200 ರೂ.ಗೆ ತಲುಪಿತ್ತು ಎಂದು ಅಖಿಲ ಭಾರತ ಸರಾಫ ಸಂಘ ತಿಳಿಸಿದೆ.