ಉತ್ತರಕನ್ನಡ: ಶ್ರೀಕ್ಷೇತ್ರ ಗೋಕರ್ಣ ಪರ್ತಗಾಳಿ ಜೀವೋತ್ತಮಮಠದ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ (76) ಸೋಮವಾರ ಬೆಳಗ್ಗೆ 11.30ಕ್ಕೆ ಹೃದಯಾಘಾತದಿಂದ ಶ್ರೀಹರಿಪಾದ ಸೇರಿದರು. 1945ರ ಆಗಸ್ಟ್ 3ರಂದು ಜನಿಸಿದ್ದ ಶ್ರೀಗಳು 1967ರ ಫೆಬ್ರವರಿ 26ರಂದು ಶ್ರೀ ಗೋಕರ್ಣ ಪರ್ತಗಾಳಿ ಮಠದ 23ನೇ ಪೀಠಾಧಿಪತಿಯಾಗಿ ನಿಯುಕ್ತಿಯಾಗಿದ್ದರು.
ಶ್ರೀ ವಿದ್ಯಾಧಿರಾಜತೀರ್ಥ ಸ್ವಾಮೀಜಿ ಅವರ ಮೂಲ ಹೆಸರು ರಾಘವೇಂದ್ರ ಆಚಾರ್ಯ. ಶ್ರೀಗಳು 2017ರ ಫಬ್ರವರಿ 9 ರಂದು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಿದ್ದರು. ಶ್ರೀ ಪರ್ತಗಾಳಿ ಮಠವು ಹಲವು ಶಾಖಾ ಮಠಗಳನ್ನು ಹೊಂದಿದೆ. ಗೋವಾ, ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.