ನ್ಯೂಸ್

VIDEO: ಕಿಲಾಡಿ ಕುರಿ...ಪೋಸ್ಟ್​ ಆಫೀಸ್​​ ಸಿಬ್ಬಂದಿಯನ್ನೇ 'ಕುರಿ' ಮಾಡುತ್ತಿದೆ...

ಜಗತ್ತಿನ ಯಾವುದೇ ಮೂಲೆಗಳಲ್ಲಿ ನಡೆಯುವ ಚಿತ್ರ-ವಿಚಿತ್ರ ಘಟನೆಗಳ ವಿಡಿಯೋಗಳನ್ನೂ ಈ ಸಾಮಾಜಿಕ ಜಾಲತಾಣಗಳು ನಮ್ಮೆದುರು ತಂದಿಡುತ್ತವೆ.

ಹಾಗೇ ಯುಎಸ್​​ನ ಅಲಾಬಾಮಾದ ಟಾಕ್ಸಿ ಎಂಬಲ್ಲಿ ಕುರಿ ಮಾಡಿದ ಕೆಲಸವೊಂದರ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದು, ನೆಟ್ಟಿಗರಂತೂ ಅದನ್ನು ನೋಡಿ ನಗುತ್ತಿದ್ದಾರೆ.

ರಸ್ತೆ ಪಕ್ಕ ಇರುವ ಪೋಸ್ಟ್​ ಬಾಕ್ಸ್​ (ಮೇಲ್ ಬಾಕ್ಸ್​)ನಲ್ಲಿ ಹಾಕುವ ಪತ್ರಗಳನ್ನು ಅಲ್ಲಿಂದ ಎಳೆದುಕೊಂಡು ತಿನ್ನುವ ವಿಡಿಯೋ ಇದು. ಫೇಸ್​ಬುಕ್ ಬಳಕೆದಾರರೊಬ್ಬರು ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಕುರಿ ಮಾಡುತ್ತಿದ್ದ ಈ ಕಿತಾಪತಿ ನೋಡಿ, ವಿಡಿಯೋ ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಪತ್ರಗಳನ್ನು ಕುರಿ ತಿನ್ನುವ ವಿಡಿಯೋ ಸಿಕ್ಕಾಪಟೆ ವೈರಲ್​ ಆಗಿದೆ. ಲಕ್ಷಾಂತರ ವೀವ್ಸ್​ ಬಂದಿದೆ. 2 ಸಾವಿರಕ್ಕೂ ಅಧಿಕ ಶೇರ್​ ಆಗಿದೆ.  ನೆಟ್ಟಿಗರಂತೂ ಸಿಕ್ಕಾಪಟೆ ಖುಷಿ ವ್ಯಕ್ತಪಡಿಸಿದ್ದಾರೆ. ಒಂದೊಮ್ಮೆ ಯಾರಿಗಾದರೂ ತಲುಪಬೇಕಿದ್ದ ಪತ್ರ ಕಾಣಿಸುತ್ತಿಲ್ಲ ಎಂದರೆ ಪೋಸ್ಟ್ ಆಫೀಸ್​​ನ್ನು ದೂರುವಂತಿಲ್ಲ. ಹಾಗೇ ಹುಡುಕಿದರೂ ಆ ಪತ್ರ ಮತ್ತೊಮ್ಮೆ ಸಿಗುವುದಿಲ್ಲ..ಸಿಕ್ಕರೂ ಒಂದಕ್ಷರವನ್ನೂ ಓದಲು ಸಾಧ್ಯವಿಲ್ಲ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.

ನೋಡಿ ಕುರಿ ಪತ್ರವನ್ನು ತಿನ್ನುವ ವಿಡಿಯೋವನ್ನು...