ನ್ಯೂಸ್

ಗೋವಾ ಪಾನಪ್ರಿಯರಿಗೆ ಕಹಿಸುದ್ದಿ

ಪಣಜಿ: ಗೋವಾದಲ್ಲಿ ಏಪ್ರಿಲ್ 1 ರಿಂದ ಮದ್ಯದ ಬೆಲೆ ಶೇ. 20ರಿಂದ ಶೇ. 50ರ ವರೆಗೆ ಏರಲಿವೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿಧಾನಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಅಬಕಾರಿ ಸುಂಕ, ಮದ್ಯ ಮಾರಾಟಗಾರರು ಸಲ್ಲಿಸುವ ಶುಲ್ಕದಲ್ಲಿ ಏರಿಕೆ ಮಾಡಲಾಗಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 100 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ಕಳೆದ ವರ್ಷ ಗಳಿಸಿದ ಆದಾಯಕ್ಕಿಂತ ಶೇ. 25ರಷ್ಟು ಹೆಚ್ಚಾಗಿರಲಿದೆ.