ಬನ್ನೂರು : ಪಟ್ಟಣದ ಸಮೀಪದ ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಗೋವಾದ ಅಪೆಕ್ಸ್ ಬ್ಯಾಂಕ್ ಹಾಗೂ ನಬಾರ್ಡ್‌ನ ಆಡಳಿತ ಮಂಡಳಿ, ಸಿಬ್ಬಂದಿ ಇತ್ತೀಚೆಗೆ ಭೇಟಿ ನೀಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನಡೆಸಲಾಗುತ್ತಿರುವ ವಿವಿಧ ಚಟುವಟಿಕೆಗಳನ್ನು ವೀಕ್ಷಿಸಿ ಶ್ಲಾಘಿಸಿದರು.
ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಿಂದ ನಡೆಸಲಾಗುತ್ತಿರುವ ಜನೌಷಧಿ ಕೇಂದ್ರ, ಜನತಾ ಬಜಾರ್, ಸೋಲಾರ್ ವಿದ್ಯುತ್ ಶೇಖರಣಾ ಘಟಕ, ರಸಗೊಬ್ಬರ ಮಾರಾಟ, ಗ್ರಂಥಾಲಯ, ನಂದಿನಿ ಮಳಿಗೆ, ಶುದ್ಧ ನೀರಿನ ಘಟಕ, ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಮೊದಲಾದವನ್ನು ನೋಡಿ ಸಂಘಕ್ಕೆ ಬರುವ ಆದಾಯ, ಅದರ ವಿಲೇವಾರಿ ಬಗ್ಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರೇಗೌಡ ಅವರಿಂದ ಮಾಹಿತಿ ಪಡೆದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಂಕರೇಗೌಡ ಮಾತನಾಡಿ, ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಣ್ಣದಾಗಿ ಆರಂಭಿಸಲಾದ ಸಂಘ ಇಂದು ಕೋಟಿ ವ್ಯವಹಾರದ ಹಂತಕ್ಕೆ ತಲುಪಿದೆ. ಇದಕ್ಕೆ ಸಹಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರ ನೆರವು ಅಪಾರ ಎಂದು ತಿಳಿಸಿದರು.
ಗೋವಾದ ಕೋಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಉಲ್ಲಾಸ್, ಉಪಾಧ್ಯಕ್ಷ ಕೃಷ್ಣ ಕುಟ್ಟಿಕರ್, ವ್ಯವಸ್ಥಾಪಕ ಅನಂತ ಚೋಡಂಕರ್, ನಬಾರ್ಡ್‌ನ ಎಜಿಎಂ ಸುಶೀಲ್ ನಾಯಕ್, ಶಾಂತವೀರ್, ವೈ.ಎಚ್.ಹನುಮಂತೇಗೌಡ, ವೈ.ಜಿ.ಮಹೇಂದ್ರ, ವೈ.ಎಸ್.ರಾಜು, ವೈ.ಎಂ.ನಾಗೇಂದ್ರ, ವೈ.ಎಂ.ಮಲ್ಲೇಶ್, ವೈ.ಎಸ್.ಶಿವಕುಮಾರ್, ವೈ.ಎ.ಪುಟ್ಟರಾಜು, ಜಿಲ್ಲಾ ಬ್ಯಾಂಕ್‌ನ ಅಧಿಕಾರಿಗಳಾದ ಹೇಮಂತ್‌ಕುಮಾರ್, ರಾಜಪ್ಪ, ಶೇಖರ್, ನವನೀತ್, ಕಾರ್ಯನಿರ್ವಹಣಾ ಅಧಿಕಾರಿ ವೈ.ಕೆ.ಕ್ಯಾತೇಗೌಡ ಇತರರು ಇದ್ದರು.