dk shivakumar statement over bjp 
ನ್ಯೂಸ್

ಹೋಗೋರೆಲ್ಲ ಹೋಗಿ ಅಲ್ಲ್ಲೇ ಚರ್ಚೆ ಮಾಡಲಿ; ಡಿಕೆ ಹೊಸ ವರಸೆ

ಬೆಂಗಳೂರು: ರಾಜ್ಯ ಸರ್ಕಾರವನ್ನು ಉರುಳಿಸಲು ಸಿಂಗಾಪುರದಿಂದ ಕಾರ್ಯಾಚರಣೆ ನಡೆಯುತ್ತಿದೆ ಎಂಬ ಊಹಾಪೋಹಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ, ಹೋಗೋರೆಲ್ಲ ಹೋಗಿ ಅಲ್ಲಿ ಚರ್ಚೆ ಮಾಡಲಿ ಎಂದು ಹೇಳಿದ್ದಾರೆ.

ಎಲ್ಲವೂ ಚರ್ಚೆ ಆಗಬೇಕಲ್ಲವೇ, ಹೋಗೋರೆಲ್ಲ ಹೋಗಿ ಅಲ್ಲಿ ಚರ್ಚೆ ಮಾಡಲಿ. ಇಲ್ಲಿ ಇರುವವರೆಲ್ಲ ಇಲ್ಲೇ ಚರ್ಚೆ ಮಾಡಲಿ. ಎಲ್ಲೆಲ್ಲಿ ಏನೇನಾಗುತ್ತಿದೆ ಎಂದು ನಮಗೆ ಮಾಹಿತಿ ಇದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು ನಮ್ಮ ಸರ್ಕಾರದ ವಿರುದ್ಧ ಕೆಲವರು ಪಿತೂರಿ ನಡೆಸುತ್ತಿರುವ ಬಗ್ಗೆ ನಮಗೂ ಮಾಹಿತಿ ಇದೆ ಎಂದಿದ್ದರು.

ಆ ಬಗ್ಗೆ ನನಗೂ ನಮ್ಮದೇ ಆದ ಮೂಲಗಳಿಂದ ಮಾಹಿತಿ ಇದೆ. ಅವರು ಬೆಂಗಳೂರಲ್ಲಿ ಮಾಡದೇ ಅಲ್ಲಿಗೆ ಹೋಗಿ ಮಾಡುವುದು ಅವರ ತಂತ್ರ. ಯಾರು ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ ಎಂದು ಹೇಳಿದ್ದರು.