ನ್ಯೂಸ್

ಗುಣಮಟ್ಟಕ್ಕೆ ಆದ್ಯತೆ ನೀಡಿ

Mysuru Rural

ಭೇರ್ಯ: ತನ್ನ ವಿರುದ್ಧ ಕೆಲವರು ಇಲ್ಲ ಸಲ್ಲದ ಆರೋಪ ಮಾಡಿರುವುದರಿಂದ ಮನಸ್ಸಿಗೆ ನೋವಾಗಿದೆ. ಅವರನ್ನು ದೇವರೇ ನೋಡಿಕೊಳ್ಳಲಿ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದ ಮುಂದುವರಿದ ಕಾಮಗಾರಿಗೆ ಗುರುವಾರ ಭುಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ನಡೆಯುತ್ತಿರುವ ಬಸ್ ನಿಲ್ದಾಣ ಮುಂದುವರಿದ ಕಾಮಗಾರಿಗೆ 1.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಗುರುವಾರ ಶಂಕುಸ್ಥಾಪನೆ ಮಾಡಿದರು.

ತಾಲೂಕಿನಲ್ಲಿ ಭೇರ್ಯ, ಚುಂಚನಕಟ್ಟೆ, ಮಿರ್ಲೆ, ಸಾಲಿಗ್ರಾಮ ಜನಸಂಪರ್ಕ ಸ್ಥಳಗಳಾಗಿವೆ. ಸಾಲಿಗ್ರಾಮ ಹೊರತುಪಡಿಸಿ ಬೇರೆಡೆ ನಿಲ್ದಾಣ ಇರಲಿಲ್ಲ. ಶೀಘ್ರ ಗ್ರಾಮದಲ್ಲಿ ನಿಲ್ದಾಣ ಜನರ ಸೇವೆಗೆ ದೊರಕಲಿದೆ ಎಂದರು.
ಕಾಮಗಾರಿ ಹೊಣೆ ಹೊತ್ತಿರುವ ಗುತ್ತಿಗೆದಾರರು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಕಳಪೆ ಎಂದು ದೂರು ಬಂದರೆೆ ಬಿಲ್ ನೀಡುವುದಿಲ್ಲ. ಕೆಲಸದ ವಿಚಾರದಲ್ಲಿ ಸಂಬಂಧ, ಪಕ್ಷದ ಕಾರ್ಯಕರ್ತ ಎಂಬುದನ್ನು ನೋಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಭೇರ್ಯ ಗ್ರಾಪಂ ಅಧ್ಯಕ್ಷ ಶಿವಶಂಕರ್, ಹೊಸಅಗ್ರಹಾರ ಗ್ರಾಪಂ ಅಧ್ಯಕ್ಷ ಯೋಗೇಶ್, ಮಾಜಿ ಅಧ್ಯಕ್ಷ ಅನೀಫ್, ಆರ್‌ಐ ಪ್ರಶಾಂತ್‌ರಾಜ್‌ಅರಸ್, ವಿಎ ರವೀಂದ್ರ, ಪಿಡಿಒ ಕಾರ್ತಿಕ್, ಮುಖಂಡರಾದ ಮಹೇಶ್‌ನಾಯಕ, ಪುನೀತ್, ಲೋಕೇಶ್, ಹೋಟೆಲ್ ಕೃಷ್ಣ, ಅನಂತ್‌ರಾಜ್, ಮೇಲೂರ್ ಕುಮಾರ್ ಇತರರಿದ್ದರು.