ಕೋಲಾರ: ಕಾಶ್ಮೀರದಲ್ಲಿ ಹಿಂದುಗಳ ಮೇಲೆ ನಡೆದಿರುವ ಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಭಯೋತ್ಪಾದಕರಿಗೆ ಪ್ರತ್ಯುತ್ತರ ನೀಡಲು ಸರ್ಕಾರ ಗಟ್ಟಿ ನಿರ್ಧಾರ ಮಾಡಬೇಕಿದೆ ಎಂದು ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.
ನಗರಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಕ್ಕಳು, ಹೆಂಡತಿಯ ಮುಂದೆ ಪ್ರಾಣ ತೆಗೆಯುತ್ತಾರೆ ಎಂದರೆ ಏನರ್ಥ?. ಪ್ರತ್ಯುತ್ತರ ಕೊಡದಿದ್ದರೆ ಮತ್ತೊಂದು ದುರಂತಕ್ಕೆ ಅವಕಾಶ ಕೊಟ್ಟಂತಾಗುತ್ತದೆ ಎಂದರು.
ಟನೆ ಸಂಭವಿಸಿದಾಗ ನಾನು ಬ್ಯಾಂಕಾಕ್ನಲ್ಲ್ಲಿದ್ದೆ. ಅಲ್ಲಿನ ಪ್ರವಾಸಿ ಸಚಿವರು ಟನೆ ಕುರಿತು ತೋರಿಸಿದಾಗ ಬಹಳ ನೋವಾಯಿತು. ಇದು ಬಹಳ ಅತಿರೇಕವಾಯಿತು. ಈ ಟನೆಯಿಂದ ಹಿಂದುಗಳು ಮುಂದಿನ ದಿನಗಳಲ್ಲಿ ಉಳಿದುಕೊಳ್ಳುವುದು ಕಷ್ಟವಾಗುತ್ತದೆ. ಈ ಟನೆಯನ್ನು ಸಮರ್ಥಿಸಿಕೊಂಡರೆ ಅವರು ಸಹ ಅದೇ ವರ್ಗಕ್ಕೆ ಸೇರಿದವರಾಗಿರುತ್ತಾರೆ ಎಂದರು.
* ಅಧಿಕಾರಿಗಳಿಗೆ ದಬಾಯಿಸುವುದು ಸಲ್ಲ
ಸಿದ್ದರಾಮಯ್ಯ ಬಗ್ಗೆ ಗೌರವ ಇದೆ. ಆದರೆ ವೇದಿಕೆ ಮೇಲೆ ಪೊಲೀಸ್ ಅಧಿಕಾರಿಗೆ ಏಕವಚನದಲ್ಲಿ ದಬಾಯಿಸುವುದು, ಹೊಡೆಯಲು ಯತ್ನಿಸುವುದು ಸರಿಯಲ್ಲ ಎಂದು ಸಮೃದ್ಧಿ ಮಂಜುನಾಥ್ ಅಭಿಪ್ರಾಯಪಟ್ಟರು. ಹಿಂದೊಮ್ಮೆ ಸಭೆಯೊಂದರಲ್ಲಿ ಐಎಎಸ್ ಅಧಿಕಾರಿಯನ್ನು ಹೊರಗಡೆ ಕಳುಹಿಸಿದ್ದರು. ಐಪಿಎಸ್ ಅಧಿಕಾರಿಗಳನ್ನು ಮನಸೋ ಇಚ್ಛೆ ನಡೆಸಿಕೊಳ್ಳುತ್ತಿದ್ದಾರೆ. ಅವರ ಮನಸ್ಥಿತಿ ನೋಡುತ್ತಿದ್ದರೆ ಎರಡೂವರೆ ವರ್ಷದಲ್ಲಿ ಅಧಿಕಾರದಿಂದ ಕೆಳಗಿಳಿಯುವ ಲಕ್ಷಣ ಕಾಣುತ್ತಿವೆ ಎಂದರು.
* ಕಿಂಗ್ಪಿನ್ ಕರೆ ಮಾಡಿದರೆ ಕೆಲಸ ಆಗ್ತದೆ!
ಮುಳಬಾಗಿಲು ತಾಲೂಕಿನಲ್ಲಿ ಬೆಟ್ಟಿಂಗ್, ಗಾಂಜಾ ದಂಧೆ ಹೆಚ್ಚಾಯಾಗಿದೆ. ಬೆಟ್ಟಿಂಗ್ನಲ್ಲಿ ಹೆಚ್ಚು ಮದ್ಯ ಸೇವಿಸಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಪೊಲೀಸ್ ಇಲಾಖೆಯು ಬೆಟ್ಟಿಂಗ್ ದಂಧೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಟನೆ ಸಂಭವಿಸುತ್ತಿರಲಿಲ್ಲ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು. ಬೆಟ್ಟಿಂಗ್ ದಂಧೆ ಕೋರರು ಕಿಂಗ್ಪಿನ್ಗಳು ಠಾಣೆಗೆ ಕೆರೆ ಮಾಡಿದರೆ ಕೆಲಸ ಆಗುತ್ತಿದೆ, ಮುಂದಿನ ದಿನಗಳಲ್ಲಿ ಪೊಲೀಸ್ ಇಲಾಖೆ ವಿಲವಾದರೆ ಇನ್ನೊಂದು ಬಿಹಾರ್ ಆಗುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಈಗಾಗಲೇ ಸದನ, ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ತಂದರೂ ಎಚ್ಚೆತ್ತುಕೊಂಡಿಲ್ಲ. ಇದಕ್ಕೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಕಿಡಿಕಾರಿದರು.