ನ್ಯೂಸ್

ಬೀದಿನಾಯಿಗಳಿಗೆ ಬಾಲೆಯ ಆಶ್ರಯ

ಸಾಮಾನ್ಯವಾಗಿ ಮಕ್ಕಳಿಗೆ ಪ್ರಾಣಿಗಳನ್ನು ಕಂಡರೆ ಪ್ರೀತಿ ಇರá-ತ್ತದೆ. ಕ್ಯಾಲಿಫೋರ್ನಿಯಾದಲ್ಲಿರುವ ಭಾರತೀಯ ಮೂಲದ ಮೀನಾ ಎಂಬ ಬಾಲಕಿ ವಯಸ್ಸಾದ ನಾಯಿಗಳಿಗೆ ಆಶ್ರಯ ಕಲ್ಪಿಸಲು ಹಣವನ್ನು ಸಂಗ್ರಹಿಸುತ್ತಿದ್ದಾಳೆ.

ತನ್ನನ್ನು ದತ್ತು ಪಡೆದ ಪೋಷಕರೊಂದಿಗೆ ಸ್ಯಾನ್​ಹೋಸೆಯಲ್ಲಿ ವಾಸಿಸುತ್ತಿರುವ ಮೀನಾ, ಬಾಲ್ಯದಿಂದಲೂ ನಾಯಿಮರಿಗಳನ್ನು ಬಹಳ ಇಷ್ಟಪಡುತ್ತಿದ್ದಳು. ‘ನನಗೆ ಎರಡು ವರ್ಷವಾಗಿದ್ದಾಗ ದತ್ತು ನೀಡಲಾಯಿತು. ಆ ವೇಳೆ ಮರಿ ಹಾಕಿದ್ದ ನಾಯಿಯ ಜತೆ ಆಡುತ್ತ ಕಾಲ ಕಳೆಯುತ್ತಿದ್ದೆ’ ಎನ್ನುವ ಮೀನಾ ಈಗಾಗಲೇ 14,000 ಡಾಲರ್ ಸಂಗ್ರಹಿಸಿದ್ದಾಳೆ. ಈ ಆಶ್ರಯಕಾರ್ಯಕ್ಕೆ ಖಾಸಗಿ ಕಂಪನಿಯೊಂದು ಕೈಜೋಡಿಸಿದೆ.