ರಾಜಸ್ಥಾನ: ಶಾಲಾ ವಿದ್ಯಾರ್ಥಿನಿಯ ಜತೆ ಅಸಭ್ಯವಾಗಿ ವರ್ತಿಸಿದ ಮೊಬೈಲ್ ಅಂಗಡಿಯವನಿಗೆ ವಿದ್ಯಾರ್ಥಿಗಳ ಗುಂಪು ಮತ್ತು ಸಾರ್ವಜನಿಕರು ಎಳೆದಾಡಿ, ಹಿಗ್ಗಾಮುಗ್ಗಾ ಥಳಿಸಿದ ಘಟನೆ ರಾಜಸ್ಥಾನದ ಕುಚಾಮನ್‌ನಲ್ಲಿ ವರದಿಯಾಗಿದೆ.
ತನ್ನ ಮೊಬೈಲ್ ಅಂಗಡಿಗೆ ಬಂದು ರೀಚಾರ್ಜ್ ಮಾಡಿ ಎಂದ ವಿದ್ಯಾರ್ಥಿನಿಗೆ 'ಐ ಲವ್ ಯೂ' ಅಂತ ಹೇಳು, ರೀಚಾರ್ಚ್ ಹಾಕ್ತಿನಿ ಎಂದು ಅಂಗಡಿ ಮಾಲೀಕ ಒತ್ತಾಯಿಸಿದ್ದಾನೆ. ಇದನ್ನು ಆಲಿಸಿದ ಯುವತಿಯ ಸಹಪಾಠಿಗಳು ಆತನ ವಿರುದ್ಧ ಕೂಗಾಡಿದ್ದು, ಅಂಗಡಿ ಮುಚ್ಚುವಂತೆ ತಿಳಿಸಿದ್ದಾರೆ. ಹುಡುಗಿಯರ ಹಾವಳಿ ಹೆಚ್ಚುತ್ತಿದ್ದಂತೆ ಬೆದರಿಕೆ ಹಾಕಿದ ಕಿಡಿಗೇಡಿ, ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಓಡಲು ಯತ್ನಿಸಿದ್ದಾನೆ. ಆದ್ರೆ, ಅಷ್ಟರೊಳಗೆ ವಿದ್ಯಾರ್ಥಿಗಳ ಗುಂಪು ಆತನನ್ನು ಅಟ್ಟಾಡಿಸಿ ಹಿಡಿದಿದ್ದಾರೆ.
ಬಾಲಕಿಯರಿಗೆ ಐ ಲವ್ ಯೂ ಎಂದು ಹೇಳುವಂತೆ ಬಲವಂತ ಮಾಡಿದ ಪಾಗಲ್ಗೆ ವಿದ್ಯಾರ್ಥಿನಿಯರು ಹಿಗ್ಗಾಮುಗ್ಗಾ ಥಳಿಸಿದ್ದು, ರಸ್ತೆಯಲ್ಲಿ ಎಳೆದಾಡಿ ಕರೆದೊಯ್ದಿದ್ದಾರೆ. ಮೊಬೈಲ್ ಅಂಗಡಿ ಮಾಲೀಕನನ್ನು ಪೊಲೀಸರಿಗೆ ಒಪ್ಪಿಸಿದ ವಿದ್ಯಾರ್ಥಿಗಳ ಧೈರ್ಯಕ್ಕೆ ನೆಟ್ಟಿಗರು ಶ್ಲಾಘಿಸಿದ್ದು, ಘಟನೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).