Girlfriend: ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧಗಳು ಹೆಚ್ಚುತ್ತಿದ್ದು, ಇದರಿಂದ ದಾಂಪತ್ಯಗಳು ಜೀವನಗಳು ಹಾಳಾಗುತ್ತಿವೆ. ಈ ಅನೈತಿಕ ಸಂಬಂಧಗಳು ಸಾವಿನ ಮನೆ ತೋರಿಸುತ್ತಿವೆ. ಇದೀಗ ಈತರಹದ ಘಟನೆಯೊಂದು ಬೆಳಕಿಗೆ ಬಂದಿದೆ.
ಹೌದು, ತನ್ನ ಪ್ರಿಯಕರನ್ನು ಮನೆಗೆ ಕರೆಯಿಸಿ ಆಕೆಯೇ ಕೊಲೆ ಮಾಡಿದ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ತರುಣ್ ತೇಜ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಇತನ ಗೆಳತಿ, ಆರೋಪಿ ಮಾಧವಿಯನ್ನು ಬಂಧಿಸಿದ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ತರುಣ್ ತೇಜ್ ಎಂಬ ವ್ಯಕ್ತಿ ಪ್ರವಾಳಿಕಳನ್ನು ಮದುವೆಯಾಗಿ 2 ಮಕ್ಕಳನ್ನು ಹೊಂದಿದ್ದ. ಆದರೆ, ತರುಣ್ ತೇಜ್ ಮಾಧವಿ ಎಂಬುವಳ ಜತೆ ವಿವಾಹೇತರ ಸಂಬಂಧ ಹೊಂದಿದ್ದ. ಎಂದಿನಂತೆ ತರುಣ್ ತೇಜ್ ನನ್ನು ತನ್ನ ಗೆಳತಿ ಮಾಧವಿ ಮನೆಗೆ ಬಾ ಎಂದು ಹೇಳಿದ್ದಳು. ಮನೆಗೆ ಹೋಗಿದ್ದ ಆತ ಶವವಾಗಿ ಪತ್ತೆಯಾಗಿದ್ದ. ಮಾಧವಿ ಮತ್ತೊಬ್ಬ ಗೆಳಯನ ಜತೆ ಸೇರಿ ತರುಣ್ನ್ನನ್ನು ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬಿಂಬಿಸಿದ್ದಾಳೆ. ಆಕೆಯೇ ಕೊಲೆ ಮಾಡಿದ್ದಾಳೆ ಎಂದು ಮೃತ ತರುಣ್ ತೇಜ್ ಕುಟುಂಬ ಆರೋಪಿಸಿದೆ. ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾಳೆ ಎಂಬುದು ತಿಳಿಯದು. ತನಿಖೆ ಬಳಿಕ ಸತ್ಯಾಂಶ ಹೊರ ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್)