ನವದೆಹಲಿ: ಹಾವು ಅತ್ಯಂತ ವಿಷಕಾರಿ ಮತ್ತು ಭಯಾನಕ ಜೀವಿಗಳಲ್ಲಿ ಒಂದಾಗಿದೆ ಹಾವುಗಳು ಎನ್ನುವ ಹೆಸರೇ ನಮ್ಮಲ್ಲಿ ಹೆಚ್ಚಿನವರಿಗೆ ಭಯವನ್ನುಂಟು ಮಾಡುತ್ತವೆ. ಎಲ್ಲೋ ಹಾವು ಇದೆ ಎಂದರೆ ಸಾಕು.. ಭಯಭೀತರಾಗಿ ಓಡತ್ತೇವೆ. ಆದರೆ, ಇತ್ತೀಚಿಗೆ ಕೆಲವರು ಅವುಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾಕಷ್ಟು ನೋಡುತ್ತಿದ್ದೇವೆ. ಹಾವುಗಳಿಗೆ ಸಂಬಂಧಿಸಿದ ವಿವಿಧ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ. ಅಂಥದ್ದೊಂದು ವಿಡಿಯೋ ಇದೀಗ ವೈರಲ್ ಆಗಿದೆ.
ಹಾವುಗಳೊಂದಿಗೆ ಹಾಸಿಗೆಯ ಮೇಲೆ ಬಾಲಕಿ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿಯ ಜೊತೆಗೆ ಆತಂಕವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಪಂಚೆ, ಧೋತಿ ಧರಿಸಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಶಾರುಖ್ ಖಾನ್; ಮಗಳು ಸುಹಾನಾ, ನಟಿ ನಯನತಾರಾ ಸಾಥ್
ಬಾಲಕಿ ಹಾಸಿಗೆ ಮೇಲೆ ಮಲಗಿದ್ದಾಳೆ. ಆಕೆ ಸುತ್ತಲೂ ಹಾವುಗಳು ಕಂಡುಬರುತ್ತದೆ. ಬಾಲಕಿ ಹಾವುಗಳನ್ನು ತಬ್ಬಿ ಮಲಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಬಾಲಕಿಗೆ ಇದು ದೈನಂದಿನ ದಿನಚರಿಯ ಭಾಗವಾಗಿದೆ ಎಂದು ವೀಡಿಯೊವನ್ನು ನೋಡುವುದರಿಂದ ನಿಮಗೆ ಅರ್ಥವಾಗುತ್ತದೆ. ಸ್ನೇಕ್ ಮಾಸ್ಟರ್ ಎಕ್ಸೋಟಿಕ್ಸ್ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.
ವಿಡಿಯೋವನ್ನು ವೀಕ್ಷಿಸಿದ ಕೆಲವು ವೀಕ್ಷಕರು ಹಾವುಗಳು ಆಟಿಕೆಗಳಲ್ಲ, ನಿರ್ಭೀತಿಯಿಂದ ಆಟವಾಡುವುದು ಅಪಾಯಕಾರಿ ಎಂದು ಕೆಲವರು ಸಲಹೆ ನೀಡಿ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.