ನ್ಯೂಸ್

ಬಾಲಕಿ ಮೇಲೆ ಬೀದಿ ನಾಯಿ ಅಟ್ಯಾಕ್​

ಹಾವೇರಿ: ಬೀದಿ ನಾಯಿಗಳ ಅಟ್ಯಾಕ್​ ನಿಂದಾಗಿ 9 ವರ್ಷದ ಬಾಲಕಿ ಬೆಚ್ಚಿ ಬಿದ್ದಿರುವ ಘಟನೆ ಭಾನುವಾರ ಸಂಜೆ ನಡೆದಿದೆ.

ಇಲ್ಲಿಯ ವಿದ್ಯಾನಗರ ಪೂರ್ವ ಭಾಗದ ಖಾಸಗಿ ಶೋರೂಮ್​ ಹಿಂಭಾಗದ ಏರಿಯಾದಲ್ಲಿ ಈ ಘಟನೆ ನಡೆದಿದೆ.

ಶ್ರೇಯಾ ಬಿ. (9) ವರ್ಷದ ಬಾಲಕಿ ಮನೆಯಿಂದ ಹೊರಗಡೆ ಬರುವಾಗ ರಸ್ತೆಯಲ್ಲಿ ನಿಂತಿದ್ದ ಎರಡು ಬೀದಿ ನಾಯಿಗಳು ದಾಳಿ ನಡೆಸಿವೆ. ಬಾಲಕಿ ಚೀರಿದ ಕೂಡಲೇ ನಾಯಿಗಳು ಓಡಿ ಹೋಗಿದ್ದು, ದುರದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸಿಲ್ಲ. ನಾಯಿಗಳು ದಾಳಿ ಮಾಡುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾ ಸೆರೆಯಾಗಿದೆ.