ಸಾಂದರ್ಭಿಕ ಚಿತ್ರ 
ನ್ಯೂಸ್

ರಾಜಕೀಯ ಮುಖಂಡನ ಲೈಂಗಿಕ ಕಿರುಕುಳ ತಾಳಲಾರದೆ ಐದನೇ ಮಹಡಿಯಿಂದ ಹಾರಿ ಸತ್ತ ಬಾಲಕಿ!

ಆಂಧ್ರಪ್ರದೇಶ: ಲೈಂಗಿಕ ಕಿರುಕುಳ ತಾಳಲಾರದೆ ಬಾಲಕಿಯೊಬ್ಬಳು ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣದ ಸಂಬಂಧ ವಿನೋದ್ ಜೈನ್ ಎಂಬಾತನ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಆಂಧ್ರಪ್ರದೇಶದ ವಿಜಯವಾಡ ಅಪಾರ್ಟ್​ಮೆಂಟ್​ವೊಂದರಲ್ಲಿ ಶನಿವಾರ ಈ ಪ್ರಕರಣ ನಡೆದಿದೆ. ಐದನೇ ಮಹಡಿಯಿಂದ ಹಾರಿ ಸತ್ತ ಬಾಲಕಿಯ ಡೆತ್​ನೋಟ್​ನಲ್ಲಿ ಅದೇ ಕಟ್ಟಡದಲ್ಲಿ ವಾಸವಿದ್ದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿದ್ದ ಕುರಿತ ಉಲ್ಲೇಖವಿತ್ತು ಎಂದು ಎಸಿಪಿ ಕೆ. ಹನುಮಂತರಾವ್ ತಿಳಿಸಿದ್ದಾರೆ.

ಆರೋಪಿಯು ವಿಜಯವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 37ನೇ ವಾರ್ಡ್​ನ ಟಿಡಿಪಿ ಮುಖಂಡ. 14 ವರ್ಷದ ಹೆಣ್ಣಿನ ಮೇಲೆ ಲೈಂಗಿಕ ಕಿರುಕುಳ ಎಸಗಿದ ಆರೋಪದ ಮೇಲೆ ಆತನನ್ನು ಪಕ್ಷದ ಅಧಿಕಾರದಿಂದ ಅಮಾನತು ಮಾಡಲಾಗಿದೆ ಎಂದು ಟಿಡಿಪಿ ತಿಳಿಸಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆತನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. -ಏಜೆನ್ಸೀಸ್