ನವದೆಹಲಿ: ಪ್ರತಿಯೊಬ್ಬರೂ ತಮ್ಮ ಮಗ ಹಾಗೂ ಮಗಳಿಗೆ ಮದುವೆ ಮಾಡಬೇಕು. ಮೊಮ್ಮಕ್ಕಳ ಜತೆ ನಾವು ಕಾಲ ಕಳೆಯಬೇಕು ಎಂದು ಆಸೆ ಪಡುತ್ತಾರೆ. ಒಳ್ಳೆಯ ಮನೆಗೆ ಮಗಳನ್ನು ಮದುವೆ ಮಾಡಿಕೊಡಬೇಕೆಂದು ಬಯಸುತ್ತಾರೆ. ಇಲ್ಲೊಬ್ಬ ವ್ಯಕ್ತಿ ತನ್ನ ಮಗಳನ್ನು ಮದುವೆ ಆಗಲು ಮುಂದೆ ಬರುವ ವರನಿಗೆ ಆಫರ್ ಮೇಲೆ ಆಫರ್ ಘೋಷಣೆ ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾನೆ.
ಅಂಕಿತಾ ಪಾಟೇಲ್ ಎಂಬವರು ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ಡಾಕ್ಟರ್ ವೃತ್ತಿಯಲ್ಲಿರುವ ತಂದೆ ತನ್ನ ಮಗಳನ್ನು ಯಾರು ಮದುವೆಯಾಗುತ್ತಾನೋ ಆತನಿಗೆ 2 ಕೋಟಿ ಬೆಲೆಯ ಬಂಗಲೆ, ನಮ್ಮ ಕ್ಲಿನಿಕ್ ಮತ್ತು 50 ಲಕ್ಷ ಎಫ್.ಡಿ ಇದೆ ಅದನ್ನು ಆತನ ಹೆಸರಿಗೆ ಬರೆಯುತ್ತೇವೆ ಎಂದು ಹೇಳುವ ದೃಶ್ಯವನ್ನು ಕಾಣಬಹುದು.
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ವೈರಲ್ ಆಗಿದ್ದು, ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಕೆಲವರು ನಿಮ್ಮ ಮಗಳನ್ನು ನಾನು ಮದುವೆಯಾಗಲು ರೆಡಿ ಇದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.
ಶ್ರೀಮಂತ ವರನನ್ನು ಹುಡುಗಿಯ ಮನೆಯವರು ಆಯ್ಕೆ ಮಾಡುವ ಈ ಕಾಲದಲ್ಲಿ ಈತ ತನ್ನ ಮಗಳನ್ನು ಕೈ ಹಿಡುವ ಹುಡುಗ ಹೇಗಿದ್ರೂ ಪರವಾಗಿಲ್ಲ, ಆತ ನನ್ನ ಮಗಳನ್ನು ಮದುವೆಯಾದ್ರೆ ಸಾಕು. ಆತನಿಗೆ 2 ಕೋಟಿಯ ಬಂಗಲೆಯ ಜೊತೆಗೆ 50 ಲಕ್ಷ ಎಫ್.ಡಿ ಕೂಡಾ ನೀಡುತ್ತೇನೆ ಎಂದು ಗಂಡ್ ಮಕ್ಳಿಗೆ ಬಿಗ್ ಆಫರ್ ಒಂದನ್ನು ನೀಡಿ ಸುದ್ದಿಯಾಗಿದ್ದಾನೆ.