ನ್ಯೂಸ್

ಆನ್​ಲೈನ್ ಆರ್ಡರ್ ಮಾಡಿದ ನೂಡಲ್ಸ್ ತಿಂದು ಬಾಲಕಿ ಸಾವು: ಪಾಸ್ಟ್ ​ಫುಡ್​ ತಂದುಕೊಡವ ಪೋಷಕರೇ ಎಚ್ಚರ!

ಚೆನ್ನೈ: ಇಂದಿನ ಮಕ್ಕಳು ಫಾಸ್ಟ್ ಫುಡ್ ಅನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅವು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಮಕ್ಕಳು ಕೆಲವೊಮ್ಮೆ ಹಠ ಮಾಡಿ ತಿನ್ನುತ್ತವೆ. ಪೋಷಕರು ಕೂಡ ಕಡಿಮೆ ಸಮಯದಲ್ಲಿ ಮಾಡಬಹುದು ಎಂದು ಮಾಡಿಕೊಡುತ್ತಾರೆ. ಮತ್ತು ಕೆಲವೊಮ್ಮೆ ಪೋಷಕರು ಆನ್​ಲೈನ್​ ಆರ್ಡ್​ರ್ ಮಾಡಿ ಮಕ್ಕಳಿಗೆ ನೀಡುತ್ತಾರೆ. ಆದರೆ ಈ ಫಾಸ್ಟ್ ಫುಡ್ ಇಬ್ಬರು ಮಕ್ಕಳ ಪ್ರಾಣವನ್ನೇ ತೆಗೆದಿದೆ.

ಹೌದು ಇಂತಹ ಪ್ರಕರಣ ತಮಿಳುನಾಡಿನ ತಿರುಚ್ಚಿಯಲ್ಲಿ ಮುನ್ನಲೆಗೆ ಬಂದಿದೆ. ಆನ್‌ಲೈನ್‌ನಲ್ಲಿ ನೂಡಲ್ಸ್ ಖರೀದಿಸಿ ತಿಂದು ಬಾಲಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ತಿರುಚ್ಚಿಯ ಕೀಲಾ ಅಂಬಿಕಾಪುರಂ ಮೂಲದ ಸ್ಟೆಫಿ ಜಾಕ್ವೆಲಿನ್ (15) ಮೃತ ಬಾಲಕಿ.

ಮಗಳಿಗೆ ನೂಡಲ್​ ಇಷ್ಟವೆಂದು ಬಾಲಕಿಯ ತಾಯಿ ಕಳೆದ ಶನಿವಾರ ಆನ್‌ಲೈನ್‌ನಲ್ಲಿ ಮಸಾಲೆಯುಕ್ತ ನೂಡಲ್ಸ್ ಅನ್ನು ಆರ್ಡರ್ ಮಾಡಿದ್ದರು. ರಾತ್ರಿ ನೂಡಲ್ಸ್ ತಿಂದು ಮಲಗಿದ ಬಾಲಕಿ ಮರುದಿನ ಬೆಳಗ್ಗೆ ಬಹಳ ಹೊತ್ತಾದರೂ ಏಳಲಿಲ್ಲ ಎನ್ನಲಾಗಿದೆ. ಇದಾದ ಬಳಿಕ ಪೋಷಕರು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಘಟನೆ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿ ಪಡೆದ ನಂತರ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಇಲ್ಲಿನ ಮಹಾತ್ಮ ಗಾಂಧಿ ಸ್ಮಾರಕ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ನೂಡಲ್ಸ್ ತಿಂದ ನಂತರ ಬಾಲಕಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಇದನ್ನು ಆರೋಗ್ಯ ಸಚಿವ ಎಂ.ಸುಬ್ರಮಣಿಯನ್ ಖಚಿತಪಡಿಸಿದ್ದಾರೆ. ಈ ಸಂಬಂಧ ಅರಿಯಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.