ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಫೇಮಸ್ ಟಿಕ್‌ಟಾಕ್ ಸ್ಟಾರ್ ಅನ್ನಾ ಪೌಲ್ ತನ್ನ ಎಕ್ಸ್ ಬಾಯ್ಸ್ ಫ್ರೆಂಡ್‌ಗೆ 2 ಕೋಟಿ ರೂಪಾಯಿಯ ಕಾರು ಗಿಫ್ಟ್ ಕೊಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
24 ವರ್ಷದ ಟಿಕ್‌ಟಾಕ್ ಸುಂದರಿ ಅನ್ನಾ ಪೌಲ್ ತನ್ನ ಮಾಜಿ ಬಾಯ್‌ಫ್ರೆಂಡ್ ಗ್ಲೆನ್ ಥಾಂಪ್ಸನ್‌ಗೆ 2,1761,544 ರೂಪಾಯಿ ಬೆಲೆ ಬಾಳುವ ನಿಸ್ಸಾನ್ ಸ್ಕೈಲೈನ್ GT-R R33 ಕಾರನ್ನು ಗಿಫ್ಟ್ ನೀಡಿದ್ದಾಳೆ. ಈ ವಿಡಿಯೋ ಕೂಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನನ್ನ ಎಕ್ಸ್ ಬಿಟ್ಟು ಹೋದಮೇಲೆ ನನಗೆ ಖರ್ಚು ಮಾಡಿದ ಹಣವನ್ನು ರಿರ್ಟನ್ ಕೊಡು ಅಂತ ಹೇಳಿದ್ದಾಳೆ. ನೀವು ನೋಡಿದ್ರೆ ಮಾಜಿ ಬಾಯ್‌ಫ್ರೆಂಡ್‌ಗೆ ಕಾರ್ ಗಿಫ್ಟ್ ನೀಡಿದ್ದೀರಾ. ಬಿಟ್ಟು ಹೋದ ಮೇಲೆ ಇಲ್ಲಿಯವರೆಗೂ ಒಂದು ಮೆಸೇಜ್ ಮಾಡಿಲ್ಲ ಎಂದು ಹುಡುಗರು ತಮ್ಮ ಎಕ್ಸ್ ಕೂಡ ಇದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.