ನ್ಯೂಸ್

VIDEO| ಸ್ಕೂಟರ್​ ಒಳಗಡೆ ಅಡಗಿ ಕುಳಿತ ದೈತ್ಯ ನಾಗರಹಾವು: ಮೈ ಜುಮ್​ ಎನಿಸುವ ವಿಡಿಯೋ ಇದು...

ನವದೆಹಲಿ: ಸ್ಕೂಟಿಯ ಮುಂಭಾಗದ ಡೂಮ್‌ನೊಳಗೆ ಅಡಗಿ ಕುಳಿತಿದ್ದ ದೈತ್ಯ ಗಾತ್ರದ ನಾಗರಹಾವನ್ನು ವ್ಯಕ್ತಿಯೊಬ್ಬರು ಬರಿಗೈಯಲ್ಲಿ ರಕ್ಷಣೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಅವಿನಾಶ್​ ಯಾದವ್​ (@avinashyadav_26) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದು, ವಿಡಿಯೋ ವೈರಲ್​ ಆಗಿದೆ. ಇನ್​ಸ್ಟಾಗ್ರಾಂ ಬಯೋದಲ್ಲಿ ಇರುವಂತೆ ಅವಿನಾಶ್ ಓರ್ವ ಸಂರಕ್ಷಣಾವಾದಿಯಾಗಿದ್ದು, ಹಾವು ರಕ್ಷಣೆ ಮಾಡಿರುವ ಅನೇಕ ವಿಡಿಯೋಗಳನ್ನು ಪೋಸ್ಟ್​ ಮಾಡಿದ್ದಾರೆ.

ಸಣ್ಣ ಸ್ಕ್ರೂಡ್ರೈವರ್ ಸಹಾಯದಿಂದ ಸ್ಕೂಟರ್​ ಡೂಮ್​ ಒಳಗಿದ್ದ ದೈತ್ಯ ನಾಗರಹಾವನ್ನು ಬರಿಗೈಯಲ್ಲಿ ಹೊರ ತೆಗೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಸ್ಕೂಟರ್​ ಒಳಗಿಂದಲೇ ನಾಗರಹಾವು ಎಡೆ ಎತ್ತಿ ಆಡಿತು ಮತ್ತು ಬುಸುಗುಡುವ ಮೂಲಕ ಆಕ್ರೋಶವನ್ನು ಹೊರಹಾಕಿತು. ಅಂತಿಮವಾಗಿ ಬಾಲ ಹಿಡಿದು ಹೊರಗೆ ಎಳೆದುಕೊಳ್ಳುವ ಮೂಲಕ ಹಾವಿಗೆ ಯಾವುದೇ ತೊಂದರೆಯಾಗದಂತೆ ರಕ್ಷಿಸಲಾಯಿತು.

ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್​ ಆದಾಗಿನಿಂದ 20 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿವೆ. ಅನೇಕ ಮಂದಿ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ಮಾಡುವ ಮೂಲಕ ತಿಳಿಸುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನನಿಸಿತು ಅಂತಾ ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)