Chat GPT: ಇಂದಿನ ಯುಗದಲ್ಲಿ ನಾವು ಫೋಟೋ ತೆಗೆದಾಗ ಅವು ಬಣ್ಣಗಳಿಂದ ತುಂಬಿ ತುಳುಕುತ್ತದೆ. ಆದರೆ ನಮ್ಮ ತಂದೆ ಅಥವಾ ಅಜ್ಜನ ಕಾಲಕ್ಕೆ ತಿರುಗಿ ನೋಡಿದರೆ ಅವು ಭಿನ್ನವಾಗಿದೆ. ಆಗ ಹೆಚ್ಚಿನ ಹೆಚ್ಚಿನ ಕಪ್ಪು ಮತ್ತು ಬಿಳಿ ಬಣ್ಣದಲ್ಲಿದ್ದವು. ನಿಮ್ಮ ಅಜ್ಜ ಅಥವಾ ತಂದೆಯ ಹಳೆಯ ಮದುವೆಯ ಫೋಟೋಗಳು ನಿಮ್ಮಲ್ಲಿದ್ದರೆ ಈ ವಿಷಯ ನಿಮ್ಮ ಆಸಕ್ತಿಯನ್ನು ಹೆಚ್ಚಿಸಬಹುದು. ತುಂಬಾ ಹಳೆಯದಾದ ಬ್ಲಾಕ್ ಅಂಡ್ ವೈಟ್ ಫೋಟೋಗಳನ್ನು ಬಣ್ಣಗಳೊಂದಿಗೆ ಮತ್ತೆ ಜೀವಂತಗೊಳಿಸಬಹುದು. OpenAIನ Chat GPT ಇದಕ್ಕೆ ನಿಮಗೆ ಸಹಾಯ ಮಾಡುತ್ತದೆ. ಹಾಗಾದ್ರೆ ಹೇಗೆ ಮಾಡುವುದು ಗೊತ್ತಾ? ಬನ್ನಿ ತಿಳಿಯೋಣ.
ಇದನ್ನೂ ಓದಿ: ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ?
ಕೆಲವೇ ಸೆಕೆಂಡುಗಳಲ್ಲಿ ChatGPTಯೂ ನಿಮ್ಮ ಕಪ್ಪು ಮತ್ತು ಬಿಳಿ ಫೋಟೋಗಳಿಗೆ ವರ್ಣರಂಜಿತ ಬಣ್ಣ ನೀಡಲು ಸಹಕರಿಸುತ್ತದೆ. ಈ ಹೊಸ ಪೀಚರ್ ಈಗ ಸಖತ್ ವೈರಲ್ ಆಗುತ್ತಿದೆ. ನಿಮ್ಮಲ್ಲಿ ಆ ರೀತಿಯ ನೀವೂ ಕೂಡಾ ಒಮ್ಮೆ ಇದನ್ನು ಟ್ರೈ ಮಾಡಬಹುದು.
ಈ ರೀತಿ ಮಾಡಿ
ಮೊದಲು ChatGPTಯ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಬೇಕು
ನಂತರ ಪ್ಲಸ್ ಐಕಾನ್ ಟ್ಯಾಪ್ ಮಾಡುವ ಮೂಲಕ ನಿಮ್ಮ ಕಪ್ಪು ಬಿಳುಪು ಫೋಟೋವನ್ನು ಅಪ್‌ಲೋಡ್ ಮಾಡಿ
ನಿಮ್ಮ ಫೋಟೋಗೆ ವರ್ಣರಂಜಿತ ಬಣ್ಣಗಳಿಗನ್ನು ನೀಡಲು ChatGPTಗೆ ನೀವು ಹೇಳಬೇಕು. ಬರವಣಿಗೆಯ ಮೂಲಕ ತಿಳಿಸಬಹುದು.
ಕೆಲವೇ ಕ್ಷಣಗಳಲ್ಲಿ, Chat GPT ನಿಮ್ಮ ವಿನಂತಿಯನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ನಿಮ್ಮ ಕಪ್ಪು ಬಿಳುಪು ಫೋಟೋವನ್ನು ಪೂರ್ಣ ಬಣ್ಣಕ್ಕೆ ತರುತ್ತದೆ.
ನಂತರ ನೀವು ಹೊಸದಾಗಿ ಬಣ್ಣದ ಫೋಟೋಗಳನ್ನು ಡೌನ್‌ಲೋಡ್ ಮಾಡಬಹುದು. (ಏಜೆನ್ಸೀಸ್)