ನ್ಯೂಸ್

ಘಿಬ್ಲಿ ಎಫೆಕ್ಟ್​; ChatGPT ಬಳಕೆಯಲ್ಲಿ ದಾಖಲೆಯ ಏರಿಕೆ! ಈ ವರ್ಷದಲ್ಲಿ 150 ಮಿಲಿಯನ್ ಜನರಿಂದ ಬಳಕೆ;ChatGPT

ChatGPT | ಇತ್ತೀಚೆಗೆ ಎಲ್ಲಿ ನೋಡಿದರೂ, ಯಾರ ಮೊಬೈಲ್​ ಪ್ರೊಫೈಲ್​ ನೋಡಿದರೂ ಈ ಘಿಬ್ಲಿ ಫೋಟೋ ಹಾವಳಿ ಜಾಸ್ತಿಯಾಗಿದೆ. AIನಿಂದಾಗಿ ಎಲ್ಲರೂ ತಮ್ಮ-ತಮ್ಮ ಫೋಟೋಗಳನ್ನು ಹಾಗೂ ತಮಗೆ ಇಷ್ಟವಾದ ವ್ಯಕ್ತಿಗಳ ಫೋಟೋವನ್ನು ಘಿಬ್ಲಿ ಪೋಟೋ ಆಗಿ ಪರಿವರ್ತಿಸಿಕೊಳ್ತಿದ್ದಾರೆ. ಇನ್ನೂ ಜನರು ಹೆಚ್ಚಾಗಿ ತಮ್ಮ ಫೋಟೋವನ್ನು ಘಿಬ್ಲಿ ಫೋಟೋವನ್ನಾಗಿ ಬದಲಾಯಿಸಲು ಹೆಚ್ಚಾಗಿ ಚಾಟ್​ಜಿಪಿಟಿ ಬಳಕೆ ಮಾಡ್ತಿರೋದ್ರಿಂದ ಈ ವರ್ಷ ಮೊದಲ ಬಾರಿಗೆ ಸರಾಸರಿ ChatGPT ಸಕ್ರಿಯ ಬಳಕೆದಾರರ ಸಂಖ್ಯೆ 150 ಮಿಲಿಯನ್ ಗಡಿ ದಾಟಿದೆ ಎಂದು ಅಂದಾಜಿಸಲಾಗಿದೆ.

ChatGPTಯ ಇಮೇಜ್-ಜನರೇಷನ್ ಅಪ್ಲಿಕೇಷನ್​ಅನ್ನು ಬಳಸಿಕೊಂಡು ಘಿಬ್ಲಿ-ಶೈಲಿಯ AI ಫೋಟೋವನ್ನು ರಚಿಸುತ್ತಿರುವುದರಿಂದಾಗಿ ಕಳೆದ ವಾರ OpenAI ನ ಚಾಟ್‌ಬಾಟ್‌ಗೆ ಬಳಕೆದಾರರಲ್ಲಿ ದಾಖಲೆಯ ಏರಿಕೆ ಕಂಡುಬಂದಿದೆ. ಮಾರುಕಟ್ಟೆ ಸಂಶೋಧನಾ ಸಂಸ್ಥೆ ದತ್ತಾಂಶದ ಪ್ರಕಾರ, ಈ ವರ್ಷ ಮೊದಲ ಬಾರಿಗೆ ಸರಾಸರಿ ಸಕ್ರಿಯ ಬಳಕೆದಾರರ ಸಂಖ್ಯೆ 150 ಮಿಲಿಯನ್ ಗಡಿಯನ್ನು ದಾಟಿದೆ ಎಂದು ಅಂದಾಜಿಸಲಾಗಿದೆ.

ಓಪನ್‌ AI ಸಿಇಒ ಹೇಳಿದ್ದೇನು?

ಹೆಚ್ಚಾಗಿ ಜನರು ಚಾಟ್‌ಬಾಟ್ ಇಮೇಜ್-ಜನರೇಟಿಂಗ್ ಟೂಲ್‌ನ್ನು ಬಳಕೆ ಮಾಡುತ್ತಿದ್ದರ ಪರಿಣಾಮ, ಕಳೆದ ವಾರ ಈ ಅಪ್ಲಿಕೇಷನ್​ನಲ್ಲಿ ಹಲವು ಅಡೆತಡೆಗಳು ಕಂಡುಬಂದವು. ಈ ಬಗ್ಗೆ ಮಾತನಾಡಿದ ಓಪನ್‌ಎಐ ಸಹ-ಸಂಸ್ಥಾಪಕ, ನಾವು ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುತ್ತಿದ್ದೇವೆ, ಆದರೆ ಓಪನ್‌ಎಐನಿಂದ ನಾವು ಸಾಮರ್ಥ್ಯದ ಸವಾಲುಗಳನ್ನು ಎದುರಿಸುವಾಗ ಸೇವೆಯು ಕೆಲವೊಮ್ಮೆ ನಿಧಾನವಾಗಿರುತ್ತದೆ ಎಂದಿದ್ದಾರೆ.

ಇನ್ನೂ ಈ ಬಗ್ಗೆ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಮಾತನಾಡಿದ್ದು, ಎರಡು ವರ್ಷಗಳ ಹಿಂದೆ ಚಾಟ್‌ಜಿಪಿಟಿಯ ರೆಡ್-ಹಾಟ್ ಲಾಂಚ್ ನಂತರ ಐದು ದಿನಗಳಲ್ಲಿ 1 ಮಿಲಿಯನ್ ಜನರು ಇದನ್ನು ಬಳಕೆ ಮಾಡಿದ್ದಾರೆ ಎಂದಿದ್ದಾರೆ.

ChatGPT ಬಳಕೆ ಪ್ರಮಾಣದಲ್ಲಿ ಏರಿಕೆ:

ಸೆನ್ಸರ್‌ಟವರ್ ಡೇಟಾದ ಪ್ರಕಾರ, ಸಕ್ರಿಯ ಬಳಕೆದಾರರು ಈ ಅಪ್ಲಿಕೇಶನ್‌ನಲ್ಲಿನ ಚಂದಾದಾರಿಕೆ ಆದಾಯ ಮತ್ತು ಅಪ್ಲಿಕೇಶನ್ ಡೌನ್‌ಲೋಡ್‌ಗಳು ಕಳೆದ ವಾರ ಗರಿಷ್ಠ ಮಟ್ಟವನ್ನು ತಲುಪಿವೆ ಎನ್ನಲಾಗಿದೆ. ಜಾಗತಿಕ ಅಪ್ಲಿಕೇಶನ್ ಡೌನ್‌ಲೋಡ್‌ಗಳು ಮತ್ತು ChatGPT ಅಪ್ಲಿಕೇಶನ್‌ನಲ್ಲಿನ ಸಕ್ರಿಯ ಬಳಕೆದಾರರು ಹಿಂದಿನ ವಾರಕ್ಕೆ ಹೋಲಿಸಿದರೆ ಈವಾರದಲ್ಲಿ 11% ಮತ್ತು 5% ರಷ್ಟು ಬೆಳೆದಿದ್ದಾರೆ. ಆದರೆ ಅಪ್ಲಿಕೇಶನ್‌ನಲ್ಲಿನ ಖರೀದಿ ಆದಾಯವು 6% ರಷ್ಟು ಹೆಚ್ಚಾಗಿದೆ ಎಂದು ಮಾರುಕಟ್ಟೆ ಗುಪ್ತಚರ ಸಂಸ್ಥೆ ತಿಳಿಸಿದೆ.

ChatGPTಯಲ್ಲಿ 'ಘಿಬ್ಲಿ' ಟ್ರೆಂಡ್​ :

ಇದೀಗ ಚ್ಯಾಟ್ ಜಿಪಿಟಿ ಎಐ ಟೂಲ್​ನ ಜನಪ್ರಿಯ ಫೀಚರ್ ಆಗಿ ಇದು ಸೇರ್ಪಡೆಗೊಂಡಿದ್ದು, ಇಲ್ಲಿ ಘಿಬ್ಲಿ ಸ್ಟೈಲ್ ಫೋಟೋ ಜನರೇಟ್ ಮಾಡುವ ಆಯ್ಕೆ ನೀಡಲಾಗಿದೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡ್ತಿದ್ದು, ಯಾರದ್ದೇ ಸೋಷಿಯಲ್ ಮೀಡಿಯಾ ಪ್ರೊಫೈಲ್ ನೋಡಿದರೂ ಘಿಬ್ಲಿ ಸ್ಟೈಲ್ ಫೋಟೋ ಕಾಣಿಸುತ್ತಿದೆ.

ಸ್ಟುಡಿಯೋ ಘಿಬ್ಲಿ ಒಂದು ಜಪಾನಿನ ಅನಿಮೇಷನ್ ಸ್ಟುಡಿಯೋ ಆಗಿದೆ. ಸ್ಟುಡಿಯೋ ಘಿಬ್ಲಿಯನ್ನು 1985 ರಲ್ಲಿ ಪ್ರಸಿದ್ಧ ನಿರ್ದೇಶಕರಾದ ಹಯಾವೊ ಮಿಯಾಜಾಕಿ, ಇಸಾವೊ ತಕಹತಾ ಮತ್ತು ನಿರ್ಮಾಪಕ ತೋಶಿಯೊ ಸುಜುಕಿ ಎಂಬುವವರು ತಯಾರು ಮಾಡಿದರು.

ಜನರು ತಮ್ಮ ನೆಚ್ಚಿನ ಫೋಟೋಗಳು, ಸಿನಿಮಾ ನಟರ ಫೋಟೋಗಳು ಅಥವಾ ಮೀಮ್‌ಗಳನ್ನು ಸ್ಟುಡಿಯೋ ಘಿಬ್ಲಿ ತರಹದ ಚಿತ್ರಗಳಾಗಿ ಬದಲಾಯಿಸುತ್ತಿದ್ದಾರೆ.

ಕೆಲ ದಿನಗಳಿಂದ ಯಾರದ್ದೇ ಸೋಷಿಯಲ್ ಮೀಡಿಯಾ ಪೇಜ್ ನೋಡಿದರೂ ಸಾಕು ಘಿಬ್ಲಿ ಸ್ಟೈಲ್ ಅನಿಮೇಟೆಡ್ ಫೋಟೋ ಕಾಣಿಸುತ್ತೆ. ಅಷ್ಟಕ್ಕೂ ಈ ಘಿಬ್ಲಿ ಫೋಟೋ ಎಂದರೇನು ಎಂಬುದನ್ನ ತಿಳಿಯೋಣ.