ನ್ಯೂಸ್

28ರಂದು ಉಚಿತ ಲಸಿಕೆ ಹಾಕಿಸಿ

ಚಿಂತಾಮಣಿ: ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ರೇಬಿಸ್​ ರೋಗ ತಡೆಗಟ್ಟುವಲ್ಲಿ ಪರಿಣಾಮಕಾರಿ ಪಾತ್ರವಹಿಸ ಲಿರುವ ರೇಬಿಸ್​ ನಿರೋಧಕ ಲಸಿಕೆ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳಿಗೆ ಹಾಕಿಸಿ ಕಾಯಿಲೆ ತಡೆಗಟ್ಟಿ ಎಂದು ಪಶುಪಾಲನಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ.ಎ.ಎಂ.ವೀರರಾಜು ತಿಳಿಸಿದ್ದಾರೆ.ಆದ್ದರಿಂದ ವಿಶ್ವ ರೇಬಿಸ್​ ದಿನಾಚರಣೆ ಅಂಗವಾಗಿ ಸೆ.28 ರಂದು ಚಿಂತಾಮಣಿ ತಾಲೂಕು ಪಶು ಆಸ್ಪತ್ರೆ, ಚಿಂತಾಮಣಿ ಹಾಗೂ ತಾಲೂಕಿನ ಎಲ್ಲ ಪಶುವೈದ್ಯ ಸಂಸ್ಥೆಗಳಲ್ಲಿ ರೇಬಿಸ್​ ಲಸಿಕೆ ಉಚಿತವಾಗಿ ನಾಯಿ ಮತ್ತು ಬೆಕ್ಕುಗಳಿಗೆ ನೀಡಲಾಗುತ್ತಿದೆ.