ವಿಶ್ವಕರ್ಮ ಸಮುದಾಯದ ಮಹಿಳೆಯರಿಗಾಗಿ ಆಯೋಜಿಸಲಾದ ಗೃಹಉತ್ಪನ್ನಗಳ ತಯಾರಿಕಾ ಉಚಿತ ಶಿಬಿರದ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಜೀವನ್, ಜ್ಯೋತಿರಾಜ್, ಲತೀಶ್ ಬಿ. ಇದ್ದರು. 
ನ್ಯೂಸ್

ತರಬೇತಿ ಪಡೆದು ಸ್ವ-ಉದ್ಯೋಗ ಗಳಿಸಲಿ

Karthika K.S

ಪ್ರಮುಖ ಮುಖ್ಯಾಂಶಗಳು

  • ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಣೆ
  • ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಅನಿಸಿಕೆ
ಮೂಲ್ಕಿ: ಮಹಿಳೆಯರು ಕೇವಲ ತರಬೇತಿ ಪಡೆದರೆ ಸಾಲದು ಅದನ್ನು ಕಾರ್ಯಗತಗೊಳಿಸಿ ಸ್ವ-ಉದ್ಯೋಗ ಮಾಡಬೇಕೆಂದು ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಹೇಳಿದರು.
ಬ್ಯಾಂಕ್ ಆಫ್ ಬರೋಡಾ ಸಂಯೋಜಿತ ಸಂಸ್ಥೆ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಆಶ್ರಯದಲ್ಲಿ ವಿಶ್ವಬ್ರಾಹ್ಮಣ ಮಹಿಳಾ ಬಳಗ ಸಹಯೋಗದೊಂದಿಗೆ ಮೂಲ್ಕಿ ವಿಶ್ವ ಬ್ರಾಹ್ಮಣ ಸಮಾಜ ಸಭಾದಲ್ಲಿ ಸ್ವ-ಉದ್ಯೋಗ ತರಬೇತಿಯ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಸಿಇಒ ಜ್ಯೋತಿರಾಜ್, ಫೈನಾನ್ಸಿಯಲ್ ಲಿಟರಸಿ ಕೌನ್ಸಿಲರ್ ಲತೀಶ್ ಬಿ., ಮೂಲ್ಕಿ ವಿಶ್ವ ಬ್ರಾಹ್ಮಣ ಸಮಾಜ ಸಭಾ ಉಪಾಧ್ಯಕ್ಷ ಯೋಗೀಶ್ ಬಿ.ಆಚಾರ್ಯ, ಸಂಪನ್ಮೂಲ ವ್ಯಕ್ತಿಗಳಾದ ಸುಧಾ, ಆಶಾ ಶಂಕರ್ , ವಿಶ್ವಬ್ರಾಹ್ಮಣ ಮಹಿಳಾ ಬಳಗ ಗೌರವ ಅಧ್ಯಕ್ಷೆ ವೀಣಾ, ಅಧ್ಯಕ್ಷೆ ಪೂರ್ಣಿಮಾ ಉಪಸ್ಥಿತರಿದ್ದರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಕೊಲಕಾಡಿ ವಿಶ್ವಕರ್ಮ ಮಹಿಳಾ ಬಳಗ ಅಧ್ಯಕ್ಷೆ ಪ್ರೇಮಾ ಸುಧಾಕರ್ ಸ್ವಾಗತಿಸಿದರು. ಸುಜಾತ ವಂದಿಸಿದರು.