ಸೋಮವಾರಪೇಟೆ ಜೈಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಕಚೇರಿಯಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಜನ್ಮ ದಿನ ಆಚರಿಸಲಾಯಿತು. ಈರಪ್ಪ, ಸುಬ್ರಹ್ಮಣ್ಯ, ಬಸಪ್ಪ, ಕೆಂಪಯ್ಯ ಇದ್ದರು. 
ನ್ಯೂಸ್

ಜನರಲ್ ಕೆ.ಎಸ್. ತಿಮ್ಮಯ್ಯ ಸೇವೆ ಅನನ್ಯ

ಸೋಮವಾರಪೇಟೆ : ಜೈ ಜವಾನ್ ಮಾಜಿ ಸೈನಿಕರ ಸಂಘದ ವತಿಯಿಂದ ಕಚೇರಿ ಆವರಣದಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಜನ್ಮ ದಿನವನ್ನು ಸೋಮವಾರ ಆಚರಿಸಲಾಯಿತು. ಮಾಜಿ ಸೈನಿಕರು ಹಾಗೂ ಸಾರ್ವಜನಿಕರು ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಅವರ ಸೇವೆಯನ್ನು ಸ್ಮರಿಸಿದರು. ಸಂಘದ ಅಧ್ಯಕ್ಷ ಈರಪ್ಪ ಮಾತನಾಡಿ, ತಿಮ್ಮಯ್ಯ ಅವರು ವೀರ ಸೇನಾನಿಯಾಗಿದ್ದರು. ಭಾರತೀಯ ಪಡೆಗಳ ಶೌರ್ಯದ ಕಥೆಗಳನ್ನು ಹೇಳುವಾಗ ಜನರಲ್ ತಿಮ್ಮಯ್ಯ ಅವರನ್ನು ನೆನಪಿಸಿಕೊಳ್ಳದೆ ಇರಲು ಸಾಧ್ಯವಿಲ್ಲ. ಸ್ವತಂತ್ರ ಭಾರತದ ಸೇನೆಯಲ್ಲಿ ಅವರ ಸೇವೆ, ಜವಾಬ್ದಾರಿ ಅನನ್ಯವಾದದು ಎಂದು ಹೇಳಿದರು. 1957ರಲ್ಲಿ 51ನೇ ವಯಸ್ಸಿನಲ್ಲಿ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡು ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎಸ್.ಎಂ. ಸುಬ್ರಹ್ಮಣ್ಯ, ಕಾರ್ಯದರ್ಶಿ ಕೆ.ಜಿ. ಬಸಪ್ಪ, ಖಜಾಂಚಿ ಕೆಂಪಯ್ಯ ಪದಾಧಿಕಾರಿಗಳಾದ ಕಿರಣ್‌ಕುಮಾರ್, ಪೂವಯ್ಯ, ಬೆಳ್ಳಿಯಪ್ಪ ಸೇರಿದಂತೆ ಇತರರು ಇದ್ದರು.