ಮುಂಬೈ: ನಟಿ ಜೆನೆಲಿಯಾ ಡಿ'ಸೋಜಾ(Actor Genelia D’Souza) ಅವರು ವಿವಾಹದ ಬಳಿಕ ಪತಿ, ಮಕ್ಕಳು ಮತ್ತು ಕುಟುಂಬಕ್ಕಾಗಿ ಸಿನಿಮಾ ರಂಗದಿಂದ ದೂರ ಉಳಿದರು. ಅವರು ಮತ್ತೆ ಸಿನಿಮಾರಂಗದಲ್ಲಿ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸುವಾಗ ಹೊಸಬರಂತೆ ಅನುಭವವಾಗಿದ್ದಾಗಿ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವೈವಾಹಿಕ ಜೀವನದಿಂದಲೇ ತಮ್ಮ ಪತಿ ರಿತೇಶ್ ದೇಶಮುಖ್ ಅವರೊಂದಿಗಿನ ಸಿನಿಮಾದಲ್ಲಿ ಆ ಪಾತ್ರವನ್ನು ಅರ್ಥಪೂರ್ಣವಾಗಿ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.
ಬಣ್ಣದ ಜಗತ್ತಿನಿಂದ ಒಂದು ದಶಕದ ಕಾಲ ವಿರಾಮ ತೆಗೆದುಕೊಂಡಿದ್ದ ನಟಿ ವೇದ ಸಿನಿಮಾದಲ್ಲಿನ ಶ್ರಾವಣಿ ಪಾತ್ರವನ್ನು ನಿರ್ವಹಿಸಿದರು. ಅಲ್ಲದೆ ಈ ಸಿನಿಮಾ ಅವರ ಪತಿ ರಿತೇಶ್ ದೇಶಮುಖ್ ಅವರ ನಿರ್ದೇಶನದ ಚೊಚ್ಚಲ ಚಿತ್ರ. ಜೆನೆಲಿಯಾ 'ಜೈ ಹೋ' ಮತ್ತು 'ಫೋರ್ಸ್ 2' ಹಿಂದಿ ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು, 2012ರ ತೆಲುಗು ಸಿನಿಮಾ 'ನಾ ಇಷ್ಟಂ' ನಂತರ ಜೆನೆಲಿಯಾ ಮರಾಠಿ ಚಿತ್ರ ವೇದದಲ್ಲಿ ಪೂರ್ಣ ಪ್ರಮಾಣದ ಪಾತ್ರವನ್ನು ನಿರ್ವಹಿಸಿದರು. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಕ್ಸಸ್ ಅನ್ನು ಪಡೆದುಕೊಂಡಿತು.
ಸಿನಿಮಾದಲ್ಲಿನ ಪಾತ್ರದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ಜೆನೆಲಿಯಾ, 10 ವರ್ಷಗಳ ಬ್ರೇಕ್ ನನಗೆ ಜೀವನದಲ್ಲಿ ಇತರ ಕೆಲಸಗಳನ್ನು ಮಾಡಲು ಅಂದರೆ ಗೃಹಿಣಿಯಾಗಲು, ನನ್ನ ಪತಿ ಮತ್ತು ಮಕ್ಕಳೊಂದಿಗೆ ಸಮಯ ಕಳೆಯಲು ಅವಕಾಶವನ್ನು ನೀಡಿತು. ಈ ಯಾವುದನ್ನೂ ಯೋಜಿಸಲಾಗಿಲ್ಲ ಎಂದು ನನಗೆ ಅನಿಸುತ್ತದೆ. ಆದರೆ ನಾನು ಅದನ್ನು ನೋಡಿದಾಗ ಅದು ಗೃಹಿಣಿಯ ಪಾತ್ರ ಎಂದು ನನಗೆ ಅನ್ನಿಸುತ್ತದೆ. ಅದು ನನಗೆ ಸಹಾಯ ಮಾಡಿತು ಎಂದು ಹೇಳಿದ್ದಾರೆ.
ಒಬ್ಬ ನಟಿಯಾಗಿ ನಾನು ಜೀವನದಿಂದ ವಸ್ತುಗಳನ್ನು ತೆಗೆದುಕೊಳ್ಳುತ್ತೇನೆ. ಅದು ನನ್ನದಾಗಿರಲಿ ಅಥವಾ ಬೇರೆಯವರದ್ದಾಗಿರಲಿ. ನಾನು ಗೃಹಿಣಿ ಅಥವಾ ಹೆಂಡತಿಯಾಗಿಲ್ಲದಿದ್ದರೆ ನಾನು ಎಂದಿಗೂ ಶ್ರಾವಣಿ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದರು. ರಿತೇಶ್ ಇಲ್ಲದಿದ್ದರೆ ನಾನು ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು ಎಂದು ಅವರು ಹೇಳಿದರು.
'ವೇದ' ಅವರ ಮೊದಲ ಮರಾಠಿ ಚಿತ್ರವಾಗಿದ್ದು, ಅದಕ್ಕೆ ಅವರೇ ನಿರ್ಮಾಪಕರೂ ಆಗಿದ್ದಾರೆ. 2003ರಲ್ಲಿ 'ತುಜೆ ಮೇರಿ ಕಸಮ್' ಚಿತ್ರದಲ್ಲಿ ರಿತೇಶ್ ಅವರೊಂದಿಗೆ ಜೆನೆಲಿಯಾ ತಮ್ಮ ನಟನಾ ವೃತ್ತಿಗೆ ಪದಾರ್ಪಣೆ ಮಾಡಿದರು.(ಏಜೆನ್ಸೀಸ್)