ಸರಗೂರು: ತಾಲೂಕಿನ ಬಿ ಮಟಕರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗೆದ್ದೆ ಹುಂಡಿ ಗುಣಪಾಲ್ ಹಾಗೂ ಉಪಾಧ್ಯಕ್ಷರಾಗಿ ಕಾಟವಾಳು ಕೆ.ಎ. ರಾಜಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಬಿ ಮಟಕರೆ ಗ್ರಾಪಂ ವ್ಯಾಪ್ತಿಯ ಬಿ ಮಟಕರೆ ಗ್ರಾಮದಲ್ಲಿ ಗುರುವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಗೆದ್ದೆ ಹುಂಡಿ ಗುಣಪಾಲ್, ಉಪಾಧ್ಯಕ್ಷ ಸ್ಥಾನಕ್ಕೆ ಕಾಟವಾಳು ಕೆ.ಎ. ರಾಜಪ್ಪ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಗೆದ್ದೆ ಹುಂಡಿ ಗುಣಪಾಲ್ ಹಾಗೂ ಉಪಾಧ್ಯಕ್ಷರಾಗಿ ಕೆ.ಎ. ರಾಜಪ್ಪ ಅವಿರೋಧವಾಗಿ ಅಯ್ಕೆಯಾದರು ಎಂದು ಚುನಾವಣಾಧಿಕಾರಿ ರೇಣುಕಾ ಘೋಷಿಸಿದರು.
ನಂತರ ಮಾತನಾಡಿದ ಗೆದ್ದೆ ಹುಂಡಿ ಗುಣಪಾಲ್, ಸಂಘದ ಎಲ್ಲ ನಿರ್ದೇಶಕರು ಸಹಕಾರದಿಂದ ನಾನೀಗ ಸಂಘದ ಅಧ್ಯಕ್ಷ ನಾಗಿದ್ದಾನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸುವ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಸಂಘದ ಏಳಿಗೆಗಾಗಿ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರ ಅಗತ್ಯ. ಸಂಘವನ್ನು ಮಾದರಿ ಸಂಘವಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ನಿರ್ದೇಶಕರಾದ ನಿಜಲಿಂಗಪ್ಪ ಕಂದಲಿಕೆ, ಕೂಸಪ್ಪ ಬಿ ತೆಲುಗು ಮಸಹಳ್ಳಿ, ಶಿವನಂಜಪ್ಪ ಬಿ.ಎಲ್. ಬಿ. ಮಟಕರೆ, ಎಚ್.ವಿ. ಶ್ರೀನಿವಾಸ ಹಿರೇಹಳ್ಳಿ, ರಂಜನಿ ಮಹೇಂದ್ರ ಹೊಸಕೋಟೆ, ಜಯಮ್ಮ ಬಂಕವಾಡಿ, ಸಿ.ಜವರಯ್ಯ ಬಿ. ಮಟಕರೆ, ಕಾಳ ಬಿ.ಮಟಕರೆ, ಎಂ.ಎ. ಸಂತೋಷ್ ಮೊಳೆಯೂರು, ಭಾಗ್ಯಾ ವೀರಭದ್ರಪ್ಪ ಬಾಡಗ, ಸಂಘದ ಮೇಲ್ವಿಚಾರಕ ಜಯಣ್ಣ, ಅಕ್ಕಪಕ್ಕದ ಮುಖಂಡರು ಹಾಗೂ ಗ್ರಾಮಸ್ಥರು ಇದ್ದರು.