ಮುಂಬೈ: ಭಾರತದ ಕುಬೇರ ಗೌತಮ್ ಅದಾನಿ ಅವರ ಈ ಕಂಪನಿಯ ಷೇರುಗಳ ಬೆಲೆಯಲ್ಲಿ ಬುಧವಾರ ಭಾರೀ ಕುಸಿತವಾಗಿದೆ.
ಬುಧವಾರದ ಆರಂಭಿಕ ವಹಿವಾಟಿನಲ್ಲಿ ಅದಾನಿ ಅವರ ಸಿಮೆಂಟ್ ಕಂಪನಿಯಾದ ಸಂಘಿ ಇಂಡಸ್ಟ್ರೀಸ್ ಷೇರುಗಳ ಬೆಲೆ 6 ಪ್ರತಿಶತದಷ್ಟು ಕುಸಿತ ಕಂಡವು. ಈ ಷೇರುಗಳು ಇಂಟ್ರಾಡೇ ವಹಿವಾಟಿನಲ್ಲಿ ಕನಿಷ್ಠ 96.55 ರೂ. ಮುಟ್ಟಿದವು. ದಿನದ ಅಂತ್ಯದಲ್ಲಿ ಶೇ. 1.02ರಷ್ಟು ಕುಸಿತ ಕಂಡು ರೂ. 103.30ಕ್ಕೆ ಮುಟ್ಟಿದವು.
ಈ ಷೇರುಗಳ ಈ ಕುಸಿತಕ್ಕೆ ಒಂದು ಪ್ರಮುಖ ಕಾರಣವಿದೆ. ಮಂಗಳವಾರ ಕಂಪನಿಯು ತನ್ನ ಪ್ರವರ್ತಕರಾದ ಅಂಬುಜಾ ಸಿಮೆಂಟ್ಸ್ ಮತ್ತು ರವಿ ಸಂಘಿ ಕಂಪನಿಯಲ್ಲಿನ ಶೇ. 3.52 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ (ಒಎಫ್ಎಸ್) ಮೂಲಕ ಮಾರಾಟ ಮಾಡುವುದಾಗಿ ಘೋಷಿಸಿತು. ಇದೇ ಕಾರಣಕ್ಕಾಗಿ ಬುಧವಾರ ಷೇರುಗಳ ಬೆಲೆಯಲ್ಲಿ ಸಾಕಷ್ಟು ಕುಸಿತ ಕಂಡಬಂದಿದೆ.
ಒಎಫ್ಎಸ್ ಷೇರುಗಳ ಮಾರಾಟವನ್ನು ಜೂನ್ 26-27 ಕ್ಕೆ ನಿಗದಿಪಡಿಸಲಾಗಿದೆ. ಪ್ರತಿ ಷೇರಿಗೆ ರೂ 90ರ ಬೆಲೆಯಲ್ಲಿ ಒಎಫ್ಎಸ್ ಷೇರು ಮಾರಾಟ ಮಾಡಲು ಉದ್ದೇಶಿಸಲಾಗಿದೆ.
ಈ ಷೇರಿನ ಮಂಗಳವಾರದ ಮುಕ್ತಾಯದ ದರ ಮಟ್ಟವಾದ ರೂ 102ಕ್ಕೆ ಹೋಲಿಸಿದರೆ ಒಎಫ್ಎಸ್ ಷೇರು ಬೆಲೆಯು ಅಂದಾಜು 12 ಪ್ರತಿಶದಷ್ಟು ಕಡಿಮೆ ಇದೆ.
ಚಿಲ್ಲರೆಯಲ್ಲದ ಲ್ಲದ ಹೂಡಿಕೆದಾರರಿಗೆ ಜೂನ್ 26 ರಂದು ಮತ್ತು ಚಿಲ್ಲರೆ ಹೂಡಿಕೆದಾರರಿಗೆ ಜೂನ್ 27 ರಂದು ಒಎಫ್ಎಸ್ ಷೇರುಗಳನ್ನು ನೀಡುವ ಪ್ರಕ್ರಿಯೆ ನಡೆಯಲಿದೆ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ.
ಏರಿಕೆಯಾಗಿದೆ. ಈ ಷೇರಿನ 52 ವಾರಗಳ ಗರಿಷ್ಠ ಬೆಲೆ ರೂ 156.20 ಮತ್ತು ಕನಿಷ್ಠ ಬೆಲೆ ರೂ 68.50 ಆಗಿದೆ.
ಕಳೆದ ಐದು ದಿನಗಳಲ್ಲಿ ಸಂಘಿ ಇಂಡಸ್ಟ್ರೀಸ್ ಷೇರುಗಳ ಬೆಲೆ ಶೇ.3ರಷ್ಟು ಏರಿಕೆ ಕಂಡಿದೆ. ಈ ಷೇರು ಬೆಲೆ ಒಂದು ತಿಂಗಳಲ್ಲಿ 10%; ಒಂದು ವರ್ಷದಲ್ಲಿ 45% ಮತ್ತು 5 ವರ್ಷಗಳಲ್ಲಿ 65% ಹೆಚ್ಚಾಗಿದೆ. ಕಳೆದ 6 ತಿಂಗಳಲ್ಲಿ ಈ ಷೇರಿನ ಬೆಲೆ 20% ನಷ್ಟು ಕುಸಿತವಾಗಿದೆ.