ನ್ಯೂಸ್

ಮಕ್ಕಳಿಗೆ ಶಿಕ್ಷಕರು ಪಾಲಕರು ಒಳ್ಳೆಯ ಶಿಕ್ಷಣ ಕೊಡಬೇಕು; ಬಿ.ಎಸ್ ಬುರಡಿಕಟ್ಟಿ

ರಾಣೆಬೆನ್ನೂರ: ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲಿ ಉತ್ತಮ ಶಿಕ್ಷಕರು ಮತ್ತು ಪಾಲಕರಿಂದ ಒಳ್ಳೆಯ ಮಾರ್ಗದರ್ಶನ ಲಭಿಸಿದಲ್ಲಿ ಹಾಗೂ ವಿದ್ಯಾರ್ಥಿಗಳು ನಿರಂತರ ಅಧ್ಯಯನ ಮಾಡಿದರೆ ಯಶಸ್ಸು ದೊರೆಯುತ್ತದೆ ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ಎಚ್. ಬುರಡಿಕಟ್ಟಿ ಹೇಳಿದರು.
ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ರಾಜ್ಯ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ವಕೀಲ ಎಸ್.ಎಸ್. ರಾಮಲಿಂಗಣ್ಣನವರ ಮಾತನಾಡಿ, ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಸಂತೋಷದ ವಿಷಯವಾಗಿದೆ. ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಹಂತದಲ್ಲಿಯೂ ಚೆನ್ನಾಗಿ ಓದಿ ಉನ್ನತ ಸ್ಥಾನ ಹೊಂದಬೇಕು ಎಂದರು.
ಪ್ರಮುಖರಾದ ಬಿ.ಬಿ. ನಂದ್ಯಾಲ, ಪ್ರಭುಲಿಂಗಪ್ಪ ಹಲಗೇರಿ, ಬಿ.ಎಂ. ಬೆನಕಣ್ಣನವರ, ಬಿ.ಎಸ್. ಅರಳಿ, ಎಸ್. ಕೆ. ನೇಸ್ವಿ ಹಾಗೂ ನಿವೃತ್ತ ನೌಕರರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.