ಚಿಂತಾಮಣಿ ನಗರದ ಟ್ಯಾಂಕ್​ ಬಂಡ್​ ರಸ್ತೆಯ ಮನೆಯೊಂದರಲ್ಲಿ ಅನಿಲ ಸೋರಿಕೆಯಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಪೊಲೀಸ್​ ಅಧಿಕಾರಿಗಳು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಅನಿಲ ಸೋರಿಕೆಯಾಗಿ ಬೆಂಕಿ 
ನ್ಯೂಸ್

ಅನಿಲ ಸೋರಿಕೆಯಾಗಿ ಬೆಂಕಿ

ಚಿಕ್ಕಬಳ್ಳಾಪುರ ಡೆಸ್ಕ್
ಚಿಂತಾಮಣಿ: ನಗರದ ಟ್ಯಾಂಕ್​ ಬಂಡ್​ ರಸ್ತೆಯ ಮನೆಯೊಂದರಲ್ಲಿ ಶನಿವಾರ ಗ್ಯಾಸ್​ ಸ್ಟೌನಲ್ಲಿಅನಿಲ ಸೋರಿಕೆಯಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ಎಚ್ಚೆತ್ತ ಮಾಲೀಕ ರೆಗ್ಯುಲೇಟರ್​ ಆಫ್​ ಮಾಡಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. ವೇಮನಾರಾಯಣ್​ ಮನೆಯಲ್ಲಿ ಬಾಡಿಗೆಗೆ ಇರುವ ಶಾಂತಮ್ಮ ಅವರು ಅಡುಗೆ ಮಾಡುವಾಗ ಸ್ಟೌನ ಸ್ವಿಚ್​ ಮುರಿದು ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕೂಗಿಕೊಂಡಿದ್ದಾರೆ. ತಕ್ಷಣ ಮನೆ ಮಾಲೀಕರು ಸ್ಥಳಕ್ಕೆ ಧಾವಿಸಿ ರೆಗ್ಯುಲೇಟರ್​ ಆ್​ ಮಾಡಿ, ಅಗ್ನಿಶಾಮಕದಳ, ನಗರಪೊಲೀಸ್​ ಠಾಣೆ,ಬೆಸ್ಕಾಂ ಮತ್ತು ಗ್ಯಾಸ್​ ಸರಬರಾಜುದಾರರಿಗೆ ಮಾಹಿತಿ ನೀಡಿದ್ದಾರೆ. ಡಿವೈಎಸ್​ಪಿ ಪಿ.ಮುರಳೀಧರ್​,ನಗರಠಾಣೆ ಪೊಲೀಸ್​ ಇನ್​ಸ್ಪೆಕ್ಟರ್​ ವೀಜಿಕುಮಾರ್​, ಅಗ್ನಿಶಾಮಕ ಠಾಣಾಧಿಕಾರಿ ಲೋಕೇಶ್​ ರೆಡ್ಡಿ, ಭಾರತ್​ ಗ್ಯಾಸ್​ ಕಂಪನಿಯ ಸಿಬ್ಬಂದಿ ಹಾಗೂ ಬೆಸ್ಕಾಂ ಸಿಬ್ಬಂದಿ ಅಗಮಿಸಿ ಪರಿಶೀಲಿಸಿದರು.