ನ್ಯೂಸ್

ನವೆಂಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಲಿದೆ 'ಗರಡಿ' ; ವಿಶೇಷ ಪಾತ್ರದಲ್ಲಿ ನಟ ದರ್ಶನ್‌ : ಪೋಸ್ಟರ್‌ ಔಟ್‌

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮುಂಬರುವ ಬಹು ನಿರೀಕ್ಷಿತ ‘ಗರಡಿ’ ಸಿನಿಮಾದ ನಾಯಕ ನಟ ಸೂರ್ಯ ಅವರ ಜನ್ಮದಿನದ ಹಿನ್ನೆಲೆ ವಿಶೇಷ ಪೋಸ್ಟರ್ ರಿಲೀಸ್​ ಮಾಡಲಾಗಿದೆ. ಈಗಾಗಲೇ ಈ ಚಿತ್ರದ ಮುಕ್ಕಾಲು ಭಾಗ ಶೂಟಿಂಗ್ ಮುಗಿದಿದ್ದು, ಟೈಟಲ್ ಸಾಂಗ್ ಚಿತ್ರೀಕರಣ ಸಹ ಆಗಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.


ʼಗರಡಿʼ ಸಿನಿಮಾದ ಮೂಲಕ ವಿಶೇಷ ಪಾತ್ರದಲ್ಲಿ ನಟ ದರ್ಶನ್‌ ಕಾಣಿಸಿಕೊಂಡಿದ್ದಾರೆ.


ʼಗರಡಿʼ ಕನ್ನಡ ಚಲನಚಿತ್ರವಾಗಿದ್ದು, ಸಿನಿಮಾದಲ್ಲಿ ಸೂರ್ಯ, ಸೋನೆಲ್‌ ಮೊಂಟೇರೊ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. .ಈ ಚಿತ್ರವನ್ನು 70 ದಿನಗಳ ಅವಧಿಯಲ್ಲಿ ಚಿತ್ರೀಕರಿಸಲಾಗಿದ್ದು, ಸಾಂಪ್ರದಾಯಿಕ ಕ್ರೀಡೆಯಾದ ಕುಸ್ತಿಯ ಬಗ್ಗೆ ಈ ಚಿತ್ರವೂ ತಿಳಿಸಲು ಹೊರಟಿದೆ.


ʼಗರಡಿʼ ಚಿತ್ರವು ದೇಸಿ ಕ್ರೀಡೆ ಮತ್ತು ಅದರ ಪ್ರಾಮುಖ್ಯತೆಯ ಸುತ್ತ ಸುತ್ತುತ್ತದೆ. ಆದರೆ, ಮುಖ್ಯ ಕಥಾವಸ್ತುವನ್ನು ಬಹಿರಂಗಪಡಿಸಲಾಗಿಲ್ಲ. ಚಿತ್ರವು ನವೆಂಬರ್ 10, 2023 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ.


ಚಿತ್ರವನ್ನು 70 ದಿನಗಳ ಅವಧಿಯಲ್ಲಿ ಚಿತ್ರೀಕರಿಸಲಾಗಿದ್ದು, ಸಾಂಪ್ರದಾಯಿಕ ಕ್ರೀಡೆಯಾದ ಕುಸ್ತಿಯ ಬಗ್ಗೆ ಈ ಚಿತ್ರವೂ ತಿಳಿಸಲು ಹೊರಟಿದೆ.
ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ನಿರಂಜನ್ ಬಾಬು ಅವರ ಛಾಯಾಗ್ರಹಣವಿದೆ. ಬಿ.ಸಿ.ಪಾಟೀಲ್‌, ಧರ್ಮಣ್ಣ ಕಡೂರ್, ರವಿಶಂಕರ್, ಸುಜಯ್ ಬೇಲೂರು, ಪ್ರಥ್ವಿ ಶಾಮನೂರು, ರಘು ಹೊಂಡದಕೇರಿ, ಚೆಲುವರಾಜ್, ಬಾಲ ನಟಿಸಿದ್ದಾರೆ. ರಾಜವಾಡಿ, ತೇಜಸ್ವಿನಿ ಪ್ರಕಾಶ್, ನಯನಾ ಶರತ್ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.