ಉತ್ತರಪ್ರದೇಶ: ಉತ್ತರಪ್ರದೇಶದ ಫೈರ್ ಬ್ರ್ಯಾಂಡ್ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಮಾಫಿಯಾ ಮತ್ತು ದರೋಡೆಕೋರರ ವಿರುದ್ಧ ಬೃಹತ್ ದಮನವನ್ನು ನಾವು ಆರಂಭಿಸಿದ್ದು ಸುಲಿಗೆ ಬೆದರಿಕೆಗಳೊಂದಿಗೆ ಜನರನ್ನು ಭಯಭೀತಗೊಳಿಸುತ್ತಿದ್ದವರು ಈಗ ನ್ಯಾಯಾಲಯದ ಶಿಕ್ಷೆಗೆ ಹೆದರಿ ನಂತರ ತಮ್ಮ ಪ್ಯಾಂಟ್ ಅನ್ನು ಒದ್ದೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಹೇಳಿದರು. ಗ್ಯಾಂಗ್ಸ್ಟರ್-ರಾಜಕಾರಣಿ ಅತೀಕ್ ಬಂಧನವಾದ ಕೆಲವೇ ದಿನಗಳಲ್ಲಿ ಈ ಹೇಳಿಕೆ ಬಂದಿದೆ.
ಯೋಗಿ ಆದಿತ್ಯನಾಥ್ "ಮೊದಲು ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸ್ವಲ್ಪವೂ ಗೌರವ ತೋರಿಸದ ಜನರು ಈಗ ತಮ್ಮ ಪ್ರಾಣಕ್ಕಾಗಿ ಭಯಪಟ್ಟುಕೊಂಡು ಓಡುತ್ತಿರುವುದನ್ನು ಜನರು ನೋಡುತ್ತಿದ್ದಾರೆ" ಎಂದು ಬಾಟ್ಲಿಂಗ್ ಪ್ಲಾಂಟ್‌ನ ಭೂಮಿ ಪೂಜೆಯ ನಂತರ ಸಭೆಯನ್ನುದ್ದೇಶಿಸಿ ಅವರು ಈ ಹೇಳಿಕೆಯನ್ನು ನೀಡಿದರು.
"ಇಂದು ರಾಜ್ಯದಲ್ಲಿ ಹೂಡಿಕೆದಾರರ ಭದ್ರತೆ ಮತ್ತು ಅವರ ಬಂಡವಾಳ ಖಾತರಿಯಾಗಿದೆ. ಉತ್ತರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮೀರಿ ಹೋಗಲು ಯಾರಿಗೂ ಅವಕಾಶವಿಲ್ಲ. ಬಲವಾದ ಕಾನೂನು-ಸುವ್ಯವಸ್ಥೆ ಪರಿಸ್ಥಿತಿಯೊಂದಿಗೆ, ಜನ ಜೀವನಕ್ಕೆ ಶತ್ರುಗಳಾಗಿರುವ ಮಾಫಿಯಾ ಈಗ ಭಯದಲ್ಲಿದೆ. ಅವರ ಜೀವನದ ಬಗ್ಗೆ, ಜನರನ್ನು ಭಯಭೀತಗೊಳಿಸುವವರ ವಿರುದ್ಧ ನ್ಯಾಯಾಲಯಗಳು ತೀರ್ಪು ನೀಡಿದಾಗ, ಅವರು ತುಂಬಾ ಭಯಭೀತರಾಗುತ್ತಾರೆ - 'ಉಂಕಿ ಪ್ಯಾಂಟ್ ಗೀಲಿ ಹೋ ಜಾ ರಹೀ ಹೈ (ಅವರು ತಮ್ಮ ಪ್ಯಾಂಟ್ ಒದ್ದೆ ಮಾಡುತ್ತಾರೆ)" ಅವರು ಹೇಳಿದರು. (ಏಜೆನ್ಸೀಸ್)