ನವವೃಂದಾನವಗಡ್ಡಿಯಲ್ಲಿರುವ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಮೂಲವೃಂದಾವನ. 
ನ್ಯೂಸ್

ಶ್ರೀ ವ್ಯಾಸರಾಜರ ಆರಾಧನೆ ನಾಳೆಯಿಂದ

ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾನವಗಡ್ಡಿಯಲ್ಲಿ ಶ್ರೀ ವ್ಯಾಸರಾಜ ಗುರುಸಾರ್ವಭೌಮರ 486ನೇ ಆರಾಧನೆ ಮಹೋತ್ಸವ ಮಾ.17ರಿಂದ 19ರವರೆಗೆ ನಡೆಯಲಿದೆ.

ಸೋಸಲೆ ಶ್ರೀವ್ಯಾಸರಾಜ ಮಠದಿಂದ ಹಮ್ಮಿಕೊಂಡಿದ್ದು, ಮಾ.17ರಂದು ಪೂರ್ವಾರಾಧನೆ, 18ರಂದು ಮಧ್ಯಾರಾಧನೆ, 19ರಂದು ಉತ್ತರಾರಾಧನೆ ಜರುಗಲಿದೆ. ಶ್ರೀಮಠದ ಪೀಠಾಧಿಪತಿ ಶ್ರೀ ವಿದ್ಯಾಶ್ರೀಶ ತೀರ್ಥರ ಸಾನ್ನಿಧ್ಯದಲ್ಲಿ ಜರುಗಲಿದ್ದು, ಮೂರು ದಿನ ವೃಂದಾವನಕ್ಕೆ ಪಂಚಾಮೃತಾಭಿಷೇಕ, ವಿದ್ವಾಂಸರಿಂದ ಪ್ರವಚನ, ವಿದ್ವತ್ ಗೋಷ್ಠಿ, ಋಕ್ಸಹಿತಾಯಾಗ, ಶ್ರೀಕೃಷ್ಣಷಡಕ್ಷರ ಮಂತ್ರ ಹೋಮ, ಮನ್ಯುಸೂಕ್ತಪುರಶ್ಚರಣಹೋಮ, ಪೂರ್ಣಾಹುತಿ, ಪಾರಾಯಣ, ದಾಸವಾಣಿ, ಮಹಾನೈವೇದ್ಯ, ಲಮಂತ್ರಾಕ್ಷತೆ ವಿತರಣೆ ಮತ್ತು ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.

ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥರು, ಸೋದೆ ಶ್ರೀವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥರು ಸಾನ್ನಿಧ್ಯವಹಿಸಲಿದ್ದಾರೆ. ಸಾಧಕರಿಗೆ ಶ್ರೀಮಠದಿಂದ ಪ್ರಶಸ್ತಿ ಪ್ರದಾನ ಇತರ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಮಠ ಪ್ರಕಟಣೆ ಮೂಲಕ ತಿಳಿಸಿದೆ.