ಗಂಗಾವತಿ: ನರಭಕ್ಷಕ ಚಿರತೆ ಸೆರೆಗೆ ಅಪರೇಷನ್ ಎಲಿಫೆಂಟಾ, ಎಲಿಫೆಂಟಾ ಫಲಗೂಡದ ಹಿನ್ನೆಲೆಯಲ್ಲಿ ಸೈನ್ ಸರ್ವೇ ಅರಣ್ಯ ಇಲಾಖೆ ಎರಡು ರೀತಿಯಲ್ಲಿ ಹೆಜ್ಜೆ ಇಟ್ಟಿದೆ. ಈಗಾಗಲೇ 20 ಸದಸ್ಯರ ತಂಡ ಶಸಗಳೊಂದಿಗೆ ಕಾಡಿಗೆ ನುಗ್ಗಿದ್ದು, ಸೈನ್ ಸರ್ವೇಗೆ ಮುಂದಾಗಿದೆ. ಮತ್ತೊಂದೆಡೆ ಸ್ಯಾಟಿಲೈಟ್ ನಿಯಂತ್ರಿಕ ಟ್ರಾೃಪರ್ (ಕ್ಯಾಮರಾ)ಗಳನ್ನು ಅಳವಡಿಸಲು ಸಜ್ಜಾಗಿದೆ.
ಈಗಾಗಲೇ ನಡೆದಿರುವ ಅಪರೇಷನ್ ಎಲಿಫೆಂಟಾದಿಂದಲೂ ಚಿರತೆ ಪತ್ತೆ ಸಾಧ್ಯವಾಗಿಲ್ಲ. ಸಕ್ರೆಬೈಲ್‌ನಿಂದ ಬಂದ ಆನೆಗಳು ಸುಸ್ತಾಗಿದ್ದು, ಇಲ್ಲಿನ ವಾತಾವರಣಕ್ಕೂ ಒಗ್ಗಿಕೊಳ್ಳುತ್ತಿಲ್ಲ. ಸಮಾಧಾನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ. ನಾಲ್ಕು ದಿನವಾದರೂ ಚಿರತೆ ಚಲನವಲನದ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಅರಣ್ಯ ಮತ್ತು ಸಾಮಾಜಿಕ ಅರಣ್ಯ ವ್ಯಾಪ್ತಿಯ 20 ಸಿಬ್ಬಂದಿ ಒಳಗೊಂಡ ತಂಡ ಈಟಿ, ಕುಡಗೋಲು, ಕಾರ್ಟೆಜ್ ತುಂಬಿ ಡಬಲ್‌ಬ್ಯಾರೆಲ್ ಬಂದೂಕಿನೊಂದಿಗೆ ಕಾಡಿನೊಳಗೆ ಸೈನ್‌ಸರ್ವೇ ಮಾಡುತ್ತಿದೆ. ಚಿರತೆ ಹೆಜ್ಜೆ ಗುರುತು, ಲದ್ದಿ ಪತ್ತೆ ಹಚ್ಚಿರುವ ತಂಡವು ಚಿರತೆ ಇರುವ ಬಗ್ಗೆ ಖಚಿತ ಪಡಿಸಿದೆ. ಚಿರತೆ ಮತ್ತು ಅದರ ಮರಿಯ ಹೆಜ್ಜೆ ಗುರುತು ವಿರುಪಾಪುರ ಗಡ್ಡಿ, ಕರಿಯಮ್ಮನಗಡ್ಡಿ ಬಳಿ ಪತ್ತೆ ಹಚ್ಚಿದೆ. ಸಂಗಾಪುರ, ಬಸವನದುರ್ಗ ನಡುವಿನ ಬೆಟ್ಟದಲ್ಲಿ ಗರ್ಜಿಸುತ್ತಿರುವ ಚಿರತೆ ಮಾಹಿತಿ ಕಲೆ ಹಾಕಿದೆ.
ಸೆಟ್‌ಲೈಟ್ ಟ್ರಾೃಪರ್: ಮತ್ತೊಂದೆಡೆ ಚಿರತೆ ಚಲವಲನ ಗಮನಕ್ಕಾಗಿ ಖಾಸಗಿ ಕಂಪನಿ ಮೊರೆ ಹೋಗಿದ್ದು, ಹುಲಿಗಳ ಸಂರಕ್ಷಣೆ ಮತ್ತು ನಿಯಂತ್ರಣಕ್ಕಾಗಿ ಪ್ರತ್ಯೇಕ ಸ್‌ಟಾ ವೇರ್ ಸಿದ್ಧಪಡಿಸಿದ ಅವನೀಶ್ ಮತ್ತು ಸ್ವಾಮಿನಾಥನ್ ತಂಡವು ಗಡ್ಡಿಗೆ ಬಂದಿದೆ. ಸ್ಯಾಟಿಲೈಟ್ ನಿಯಂತ್ರಣದ ಟ್ರಾೃಪರ್ ಅಳವಡಿಸಲು ನಿರ್ಧರಿಸಿದೆ. ಈಗಾಗಲೇ ಪ್ರಾಯೋಗಿಕ ಪರೀಕ್ಷೆ ನಡೆದಿದೆ.