ನ್ಯೂಸ್

ಕೆ.ಕಲ್ಯಾಣ್​ರ ಮನೆ ಹಾಳು ಮಾಡಿದ ಮನೆಕೆಲಸದವಳು; ಗಂಗಾ, ಶಿವಾನಂದ್ ಹಿಸ್ಟರಿಯೇ ಭಯಾನಕ

lakshmihegde

ಗೀತ ರಚನೆಕಾರ ಕೆ. ಕಲ್ಯಾಣ್​ ಕೌಟುಂಬಿಕ ಕಲಹದಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವುದು ಇಬ್ಬರ ಹೆಸರು. ಒಂದು ಗಂಗಾ ಕುಲಕರ್ಣಿ..ಇನ್ನೋರ್ವ ಶಿವಾನಂದ ವಾಲಿ.

ಇಂದು ಸುದ್ದಿಗೋಷ್ಠಿ ನಡೆಸಿದ ಕಲ್ಯಾಣ್​ ಅವರೂ ಕೂಡ ಇವರಿಬ್ಬರ ಬಗ್ಗೆಯೇ ಮಾತನಾಡಿದ್ದಾರೆ. ಮನೆ ಕೆಲಸಕ್ಕೆಂದು ಬಂದ ಗಂಗಾ ಕುಲಕರ್ಣಿ, ಶಿವಾನಂದ ವಾಲಿಯಿಂದ. ಇವರಿಬ್ಬರೊಂದಿಗೆ ನನ್ನ ಅತ್ತೆ-ಮಾವ ಸಂಪರ್ಕದಲ್ಲಿದ್ದರು. ಲಿಂಬೆ ಹಣ್ಣಿಟ್ಟುಕೊಂಡು ಪೂಜೆಯನ್ನೂ ಮಾಡುತ್ತಿದ್ದರು. ನನ್ನ ಪತ್ನಿಯ ಅಕೌಂಟ್​​ನಿಂದ ಅವನ ಅಕೌಂಟ್​ಗೆ ಹಣ ವರ್ಗಾವಣೆಯಾಗಿದ್ದಲ್ಲದೆ, ಅತ್ತೆ-ಮಾವನ ಹೆಸರಿನ ಆಸ್ತಿಯನ್ನೂ ಶಿವಾನಂದ ವಾಲಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದೀಗ ಗಂಗಾ ಕುಲಕರ್ಣಿ ಮತ್ತು ಶಿವಾನಂದ ವಾಲಿ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಇವರಿಬ್ಬರ ಕೆಲಸವೇ ಮಾಟ-ಮಂತ್ರದ ಮೂಲಕ ಹಣ ಲಪಟಾಯಿಸುವುದು ಎಂಬ ಸತ್ಯ ಬಹಿರಂಗವಾಗಿದೆ.

ಗಂಗಾ ಕುಲಕರ್ಣಿಯ ನಿಜವಾದ ಹೆಸರು ಜ್ಯೋತಿ ಕುಲಕರ್ಣಿ. ಬೇರೆ ಹೆಸರಿನಲ್ಲಿ ಬಂದು ಮನೆ ಕೆಲಸಕ್ಕೆ ಸೇರಿಕೊಂಡಿದ್ದಳು. ಅದಕ್ಕೂ ಮೊದಲು 2016ರಿಂದ 17ರವರೆಗೆ ಧಾರವಾಡದ ಮಾಳಮಡ್ಡಿಯ ಧಾರವಾಡಕರ್ ಎಂಬುವರ ಮನೆಯಲ್ಲಿ ಕೆಲಸಕ್ಕೆ ಇದ್ದಳು. ಶಿವಾನಂದ ವಾಲಿ, ಗಂಗಾ ಕುಲಕರ್ಣಿ ಇಬ್ಬರೂ ಆಪ್ತರಾಗಿದ್ದು ಜತೆಯಾಗಿಯೇ ಮೋಸ ಮಾಡುತ್ತಾರೆ. ಶಿವಾನಂದ ವಾಲಿ ಊದಿನಕಡ್ಡಿ ಸ್ವಾಮಿಯೆಂದೇ ಫೇಮಸ್​ ಆದವನು ಎಂಬ ಸತ್ಯ ಗೊತ್ತಾಗಿದೆ. (ದಿಗ್ವಿಜಯ ನ್ಯೂಸ್​)