ಗಂಗಾ ಎಕ್ಸ್‌ಪ್ರೆಸ್‌ವೇನಲ್ಲಿ ಮೀನು ಹಿಡಿದ ಸ್ಥಳೀಯರು 
ನ್ಯೂಸ್

ಗಂಗಾ ಎಕ್ಸ್‌ಪ್ರೆಸ್‌ವೇ ಜಲಾವೃತ ; ವೈರಲ್ ಆಯ್ತು ರಸ್ತೆಯಲ್ಲೇ ಮೀನು ಹಿಡಿದ ದೃಶ್ಯ | Ganga Expressway

ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಸುರಿದ ಭಾರಿ ಮಳೆಯಿಂದ ಗಂಗಾ ಎಕ್ಸ್‌ಪ್ರೆಸ್‌ವೇ ಸಂಪರ್ಕಿಸುವ ಇಂಟರ್‌ಚೇಂಜ್‌ನ ಸುಮಾರು 50 ಮೀಟರ್‌ ಭಾಗ ಜಲಾವೃತಗೊಂಡಿದೆ. ನೀರು ನಿಂತಿದ್ದ ಪ್ರದೇಶದಲ್ಲಿ ಸ್ಥಳೀಯರು ಮೀನು ಹಿಡಿಯುತ್ತಿರುವ ದೃಶ್ಯಗಳು ಇದೀಗ ವೈರಲ್ ಆಗಿವೆ.

Uttar Pradesh Rain: ಉತ್ತರ ಪ್ರದೇಶದ ಉನ್ನಾವ್‌ನಲ್ಲಿ ಭಾರಿ ಮಳೆಗೆ ಬಶೀರತ್‌ಗಂಜ್ ಇಂಟರ್‌ಚೇಂಜ್‌ನ ಒಂದು ಭಾಗ ಜಲಾವೃತಗೊಂಡಿದೆ. ನೀರು ನಿಂತ ರಸ್ತೆಯಲ್ಲಿ ಸ್ಥಳೀಯರು ಬಲೆ ಹಿಡಿದು ಮೀನು ಹಿಡಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಉನ್ನಾವ್‌ನಲ್ಲಿ 24 ಗಂಟೆಗಳಲ್ಲಿ ಸುಮಾರು 65 ಮಿ.ಮೀ. ಮಳೆ ದಾಖಲಾಗಿದೆ. ಆದರೆ, ಇಡೀ ಗಂಗಾ ಎಕ್ಸ್‌ಪ್ರೆಸ್‌ವೇ ಜಲಾವೃತವಾಗಿಲ್ಲ ಎಂದು ಯುಪಿಇಐಡಿಎ ಸ್ಪಷ್ಟಪಡಿಸಿದೆ. ಬಶೀರತ್‌ಗಂಜ್ ಇಂಟರ್‌ಚೇಂಜ್‌ನ ನಾಲ್ಕು ಲೂಪ್‌ಗಳ ಪೈಕಿ ಸುಮಾರು 50 ಮೀಟರ್‌ ಭಾಗ ಮಾತ್ರ ನೀರಿನಲ್ಲಿ ಮುಳುಗಿದ್ದು, ಮುಖ್ಯ ಎಕ್ಸ್‌ಪ್ರೆಸ್‌ವೇಗೆ ನೀರು ನುಗ್ಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರು ನಿಲ್ಲಲು ಕಾರಣವೇನು?

ವಿದ್ಯುತ್ ಪ್ರಸರಣ ಮಾರ್ಗ ಸ್ಥಳಾಂತರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂಟರ್‌ಚೇಂಜ್‌ನ ಈ ಭಾಗವನ್ನು ಕಡಿಮೆ ಮಟ್ಟದಲ್ಲಿ ನಿರ್ಮಿಸಲಾಗಿತ್ತು. ಹೀಗಾಗಿ ಭಾರಿ ಮಳೆಗೆ ಇಲ್ಲಿ ನೀರು ನಿಂತಿದೆ ಎಂದು ಯುಪಿಇಐಡಿಎ ತಿಳಿಸಿದೆ. ನೀರು ತೆರವುಗೊಳಿಸಲು ಪಂಪ್‌ಗಳನ್ನು ಬಳಸಲಾಗಿದ್ದು, ವಾಹನ ಸಂಚಾರಕ್ಕೆ ಉಳಿದ ಮೂರು ಲೂಪ್‌ಗಳನ್ನು ಬಳಸಿಕೊಳ್ಳಲಾಗಿದೆ

ಶಾಶ್ವತ ಪರಿಹಾರಕ್ಕೆ ಚರ್ಚೆ

ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯುಪಿಇಐಡಿಎ ಮತ್ತು ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ (UPPCL) ನಡುವೆ ಚರ್ಚೆ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಈ ನಡುವೆ, ಜಲಾವೃತಗೊಂಡ ಪ್ರದೇಶದಲ್ಲಿ ಸ್ಥಳೀಯರು ಬಲೆ ಹಿಡಿದು ಮೀನು ಹಿಡಿಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆಗೆ ವ್ಯಾಪಕ ಗಮನ ಸೆಳೆದಿವೆ.

ಇದನ್ನೂ ಓದಿ: ಅದೊಂದು ಚೈಲ್ಡ್​... ಪತ್ನಿ ನಜ್ರಿಯಾ ನಜಿಮ್ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ನಟ ಫಹಾದ್ ಫಾಸಿಲ್..! Fahadh Faasil

36 ಸಾವಿರ ಕೋಟಿ ರೂ. ಯೋಜನೆ

594 ಕಿ.ಮೀ. ಉದ್ದದ ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಯ ಅಂದಾಜು ವೆಚ್ಚ 36 ಸಾವಿರ ಕೋಟಿ ರೂಪಾಯಿ. ಇಡೀ ಎಕ್ಸ್‌ಪ್ರೆಸ್‌ವೇ ಜಲಾವೃತವಾಗಿಲ್ಲ; ಇಂಟರ್‌ಚೇಂಜ್‌ನ ಸುಮಾರು 50 ಮೀಟರ್‌ ಭಾಗ ಮಾತ್ರ ನೀರಿನಲ್ಲಿ ಮುಳುಗಿತ್ತು ಎಂದು ಯುಪಿಇಐಡಿಎ ತಿಳಿಸಿದೆ.(ಏಜೆನ್ಸೀಸ್​)