ರಾಣೆಬೆನ್ನೂರ: ಇಲ್ಲಿಯ ಗಂಗಾ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಗುರುವಾರ ಜರುಗಿತು.
ಅಧ್ಯಕ್ಷರಾಗಿ ರತ್ನಾಕರ ಕುಂದಾಪುರ, ಉಪಾಧ್ಯಕ್ಷರಾಗಿ ರಾಜೇಂದ್ರ ಅಂಬಿಗೇರ ಹಾಗೂ ಸದಸ್ಯರಾಗಿ ಲಕ್ಷ$್ಮಣ ದಾಸರ, ಲಕ್ಷ$್ಮಣ ಸುಣಗಾರ, ಪ್ರಕಾಶ ಬಾಕಿರ್, ಸುರೇಶ ಜಡಮಲಿ, ರತ್ಮಮ್ಮ ಭೋವಿ, ರೇಣುಕಾ ಅಬ್ಬಿಗೇರ, ರಾಮಪ್ಪ ಲಮಾಣಿ, ಶಿವಲಿಂಗಪ್ಪ ಮೇದಾರ, ಶಿವನಗೌಡ ಗ್ಯಾನಗೌಡ್ರ, ಕೃಷ್ಣಮೂತಿರ್ ಸುಣಗಾರ ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಇಲಾಖೆಯ ಅಧಿಕಾರಿ ಸುಧಾ ಕುಲಕಣಿರ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷ ರತ್ನಾಕರ ಕುಂದಾಪುರ ಮಾತನಾಡಿ, ನಮ್ಮ ಸೊಸಾಯಿಟಿ ಪ್ರಾರಂಭವಾಗಿ 25 ವರ್ಷಗಳಾಗಿದ್ದು ಇದೀಗ 50 ಕೋಟಿ ವಾಷಿರ್ಕ ವಹಿವಾಟು ಮಾಡುತ್ತಿದೆ. ಎಲ್ಲ ಸಮಾಜದ ಜನರು ವ್ಯವಹಾರ ವಹಿವಾಟು ಮಾಡಿದ್ದಾರೆ. ಸೊಸಾಯಿಟಿ ಮೂಲಕ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಸಿಲಿಂಡರ್ ಪೂರೈಕೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರದಂತಹ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ ಎಂದರು.
ಪ್ರಮುಖರಾದ ಕೊಟ್ರೇಶಪ್ಪ ಎಮ್ಮಿ, ರಾಜು ಅಡಿವೆಪ್ಪನವರ, ಪ್ರಕಾಶ ಜೈನ್, ಕರಬಸಪ್ಪ ಮಾಕನೂರ, ಪ್ರಕಾಶ ಮಾಳಗಿ, ರತ್ನಾ ಪುನೀತ್, ಸೊಸೈಟಿ ವ್ಯವಸ್ಥಾಪಕಿ ಅನ್ನರ್ಪೂಣ ಬಾಕಿರ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
&&&&&&&&&&&&&&&&&