ನ್ಯೂಸ್

ಪ್ರತಿಭಾ ಪುರಸ್ಕಾರ, ಸನ್ಮಾನ, ಯಕ್ಷಗಾನ ಪ್ರದರ್ಶನ ಆ. 15ರಂದು

ರಾಣೆಬೆನ್ನೂರ: ಇಲ್ಲಿಯ ಗಂಗಾ ವಿವಿಧ ಉದ್ದೇಶಗಳ ಸಹಕಾರ ಸಂದ ವತಿಯಿಂದ ಆ. 15ರಂದು ಮಾಜಿ ಸಿಎಂ ದಿ. ದೇವರಾಜ ಅರಸು ಅವರ 109ನೇ ಜನ್ಮದಿನದ ಪ್ರಯುಕ್ತ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಶ್ರೀ ಮಹಿಷಿ ಮದಿರ್ನಿ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಸಂದ ಅಧ್ಯಕ್ಷ ರತ್ನಾಕರ ಕುಂದಾಪುರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ನಗರದ ಕರಾವಳಿ ಸಭಾಭವನದಲ್ಲಿ ಸಮಾರಂಭ ಜರುಗುವುದು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀೆಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಅಂಕಗಳಿಸಿದ ಎಲ್ಲ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅರ್ಹರು ಆ. 5ರೊಳಗೆ ಅಜಿರ್ ಸಲ್ಲಿಸಬೇಕು. ಸಮಾರಂಭವನ್ನು ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ದೊಡ್ಡಮನಿ ಉದ್ಘಾಟಿಸುವರು. ಸಂದ ಅಧ್ಯಕ್ಷ ರತ್ನಾಕರ ಕುಂದಾಪುರ ಅಧ್ಯಕ್ಷತೆ ವಹಿಸುವರು ಎಂದರು.
ಅದೇ ರಾತ್ರಿ 8 ಗಂಟೆಗೆ ಕುಂದಾಪುರ ಸಭಾಭವನದಲ್ಲಿ ಕರಾವಳಿ ಬಳಗದ ಆಶ್ರಯದಲ್ಲಿ ನಡೂರು, ಮಂದತಿರ್ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಶ್ರೀ ಮಹಿಷ ಮದಿರ್ನಿ ಎಂಬ ಯಕ್ಷಗಾನ ಪ್ರದರ್ಶನ ಜರುಗಲಿದೆ ಎಂದು ತಿಳಿಸಿದರು.
ಸಂದ ಪ್ರಮುಖರಾದ ಕೃಷ್ಣಮೂತಿರ್ ಸುಣಗಾರ, ಗಣೇಶ ಜಡಮಲಿ, ರಾಮಪ್ಪ ಲಮಾಣಿ, ವೀರಣ್ಣ ಬಾಕಿರ್, ಅನ್ನಪೂರ್ಣ ಬಾಕಿರ್ ಮತ್ತಿತರರು ಉಪಸ್ಥಿತರಿದ್ದರು.