ನ್ಯೂಸ್

ಖಾದಿ ಮಂಡಳಿಯಲ್ಲಿ ಗಾಂಧಿ ಜಯಂತಿ

ಬೆಂಗಳೂರು: ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಲ್ಲಿ ವಿಶೇಷ ರೀತಿಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಮಂಡಳಿ ಪ್ರಧಾನ ಕಚೇರಿಯಲ್ಲಿ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುವ ಕಚೇರಿ ಸಹಾಯಕ ಪ್ರಭಾಕರ ಅವರನ್ನು ಗುರುತಿಸಿ ಗೌರವಿಸಲಾಯಿತು. ಜತೆಗೆ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ತತ್ವಾದರ್ಶಗಳನ್ನು ಇದೇ ವೇಳೆ ಅಧಿಕಾರಿಗಳು ಮೆಲುಕು ಹಾಕಿದರು.

ಹಾಗೆಯೇ ಗುರುಗುಹ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳು ‘ಗಾಂಧಿ ಸ್ಮತಿ’ ಭಜನೆಗಳನ್ನು ಪ್ರಸ್ತುತಪಡಿಸಿದರೆ, ಸಿಬ್ಬಂದಿ ಭಜನೆಯಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಮಂಡಳಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಆರ್.ರಾಜಪ್ಪ, ಉಪ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಆಡಳಿತ) ಸೋಮಪ್ಪ ಕಡಕೋಡ, ಸಂಪತ್ ಕುಮಾರ್, ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಅಡಿಗ, ರಾಜಕುಮಾರ್, ಲಕ್ಷ್ಮೀ ಮೊದಲಾದವರು ಹಾಜರಿದ್ದರು.