ಬಾಳೆಹೊನ್ನೂರಿನ ವಿದ್ಯಾಗಣಪತಿ ಮಹೋತ್ಸವದ ಅಂಗವಾಗಿ ಗಣಪತಿ ಸನ್ನಿಧಿಯಲ್ಲಿ ಗಣಹೋಮ ನೆರವೇರಿತು. 
ನ್ಯೂಸ್

ಬಾಳೆಹೊನ್ನೂರು ಗಣೇಶೋತ್ಸವದಲ್ಲಿ ಗಣಪತಿ ಹೋಮ

ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿ ಆಯೋಜಿಸಿರುವ 65ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಗಣಪತಿ ಸನ್ನಿಧಿಯಲ್ಲಿ ಗಣಪತಿ ಹೋಮ ಹಾಗೂ ಮಹಾಪೂಜೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶನಿವಾರ ನಡೆಯಿತು.
ಅರ್ಚಕ ಪ್ರಕಾಶ್‌ಭಟ್ ನೇತೃತ್ವದಲ್ಲಿ ಗಣಪತಿ ಹೋಮ, ಗಣೇಶ ವಿಗ್ರಹಕ್ಕೆ ಮಹಾ ಮಂಗಳಾರತಿ ನೆರವೇರಿತು. ಬಳಿಕ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಮಾಡಿ ಅನ್ನಸಂತರ್ಪಣೆ ಮಾಡಲಾಯಿತು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮಿತಿಯ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ, ಕಾರ್ಯದರ್ಶಿ ಸುರೇಂದ್ರ, ಸಿ.ವಿ.ಸುನೀಲ್, ಖಜಾಂಚಿ ತ್ರಿವಿಕ್ರಮಭಟ್, ಸುಧಾಕರ್, ಸಲಹೆಗಾರ ಹಿರಿಯಣ್ಣ, ಪ್ರಮುಖರಾದ ಕೆ.ಕೆ.ವೆಂಕಟೇಶ್, ಎಂ.ಎಸ್.ಜಯಪ್ರಕಾಶ್, ಟಿ.ಎಂ.ಉಮೇಶ್, ಕೆ.ಎಸ್.ಹರೀಶ್, ಟಿ.ಎಂ.ನಾಗೇಶ್, ಬಿ.ಕೆ.ಮಧುಸೂದನ್, ಶಂಕ್ರಪ್ಪಗೌಡ, ಎಂ.ಆರ್.ರವೀಂದ್ರ, ನಾರಾಯಣ, ಜಯರಾಮ್ ಇತರರಿದ್ದರು.