ಬಾಳೆಹೊನ್ನೂರಿನ ಜೇಸಿ ವೃತ್ತ ಬಲಮುರಿ ಗಣಪತಿ ದೇವಸ್ಥಾನದ ವಾರ್ಷಿಕ ಪೂಜೆ ಅಂಗವಾಗಿ ಅಷ್ಟದ್ರವ್ಯ ಗಣಪತಿ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. 
ನ್ಯೂಸ್

ಗಣಪತಿ ವಾರ್ಷಿಕ ಪೂಜೆ ಸಂಪನ್ನ

ಬಾಳೆಹೊನ್ನೂರು: ಪಟ್ಟಣದ ಜೇಸಿ ವೃತ್ತದ ಬಲಮುರಿ ಗಣಪತಿ ದೇವಸ್ಥಾನದ 28ನೇ ವರ್ಷದ ವಾರ್ಷಿಕ ಪೂಜಾ ಕಾರ್ಯಕ್ರಮ ಭಾನುವಾರ ನಡೆಯಿತು.
ವಾರ್ಷಿಕ ಪೂಜೆ ಅಂಗವಾಗಿ ಗುರು ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಗಣಪತಿ ದೇವರಿಗೆ ಪಂಚಾಮೃತಾಭಿಷೇಕ, ಅಥರ್ವಶೀರ್ಷಾಭಿಷೇಕ, ಪುಷ್ಪಾಲಂಕಾರ, ಅಷ್ಟದ್ರವ್ಯ ಗಣಪತಿ ಹೋಮ, ನಾಗದೇವರಿಗೆ ಪೂಜೆ, ನವಗ್ರಹ ಪೂಜೆ, ಸಾಮೂಹಿಕ ಸತ್ಯನಾರಾಯಣ ವ್ರತ, ಸಂಕಷ್ಟ ಚತುರ್ಥಿ ಪೂಜೆ ಹಾಗೂ ಶ್ರೀರಂಗ ಪೂಜೆ ನೆರವೇರಿಸಲಾಯಿತು.
ದೇವಾಲಯದ ಪ್ರಧಾನ ಅರ್ಚಕ ಸುನೀಲ್‌ಭಟ್ ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಆರ್.ವೆಂಕಪ್ಪಗೌಡ ಸೇರಿದಂತೆ ಸಮಿತಿ ಪದಾಧಿಕಾರಿಗಳು, ನೂರಾರು ಭಕ್ತರು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ್ದರು.