ನ್ಯೂಸ್

ಬಹು ನಿರೀಕ್ಷಿತ ರಾಮಚರಣ್ ಚಿತ್ರ ಮುಕ್ತಾಯ - ಅಭಿಮಾನಿಗಳಲ್ಲಿ ಹೆಚ್ಚಿದ ಉತ್ಸುಕತೆ

Webdesk - Narayanaswamy

ಚೆನ್ನೈ: ಆರ್​ಆರ್​ಆರ್​ನ ದೊಡ್ಡ ಯಶಸ್ಸಿನ ನಂತರ, ರಾಮಚರಣ್ ನಿರ್ದೇಶಕ ಶಂಕರ್ ಅವರ "ಗೇಮ್ ಚೇಂಜರ್" ನಲ್ಲಿ ನಟಿಸಿದ್ದಾರೆ. ಇದು ರಾಜಕೀಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿ್ದು, ನಿರ್ದೇಶಕ ಶಂಕರ್ ಅವರಿಗೆ ತೆಲುಗಿನಲ್ಲಿ ಇದು ಮೊದಲ ಸಿನಿಮಾ. ಶಂಕರ್ ಜೊತೆಗೆ ನಿರ್ದೇಶಕ ಕಾರ್ತಿ ಸುಬ್ಬರಾಜ್ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದಾರೆ.

ಕಿಯಾರಾ ಅಡ್ವಾಣಿ, ಅಂಜಲಿ, ಎಸ್.ಜೆ.ಸೂರ್ಯ, ಸಮುದ್ರಕನಿ, ನಾಸರ್ ಮುಂತಾದ ಪ್ರಮುಖ ನಟರು ನಟಿಸಿದ್ದಾರೆ. ಈ ಚಿತ್ರವನ್ನು ದಿಲ್ ರಾಜು ನಿರ್ಮಿಸಿದ್ದು, ಥಮನ್ ಸಂಗೀತ ಸಂಯೋಜನೆ ಮತ್ತು ಮತ್ತು ಶ್ರೀ ಅವರ ಛಾಯಾಗ್ರಹಣವಿದೆ. ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟವಾಗದಿದ್ದರೂ, ಅಭಿಮಾನಿಗಳಿಗೆ ಒಂದು ರೋಚಕ ಸುದ್ದಿ ಇದೆ.

ಅದರಂತೆ ರಾಮಚರಣ್ ‘ಗೇಮ್ ಚೇಂಜರ್’ ಚಿತ್ರದ ಸಂಪೂರ್ಣ ಶೂಟಿಂಗ್ ಮುಗಿಸಿದ್ದಾರೆ ಎಂಬ ವರದಿಗಳಿವೆ. ಈಗ ರಾಮ್ ಚರಣ್ ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಹು ನಿರೀಕ್ಷಿತ ಚಿತ್ರದ ಚಿತ್ರೀಕರಣ ಮುಗಿದಿರುವುದಕ್ಕೆ ರಾಮ್ ಚರಣ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಸುಮಾರು 3 ವರ್ಷದಿಂದ ಚಿತ್ರದ ನಿರ್ಮಾಣ ಕಾರ್ಯ ನಡೆಯುತ್ತಿತ್ತು ಎಂಬುದು ಗಮನಾರ್ಹ.